ಮಹಿಳೆಯರೇ ನಡೆಸುತ್ತಿದ್ದ ಕಳ್ಳಭಟ್ಟಿ ಅಡ್ಡೆ: ಬೆಳ್ಳಂಬೆಳಿಗ್ಗೆ ರೇಡ್ ಬಿದ್ದಾಗ ಏನಾಯ್ತು ಗೊತ್ತಾ…?
ಹಾವೇರಿ: ಮಹಿಳೆಯರೇ ಮುಂದೆ ನಿಂತು ಸಿದ್ಧಪಡಿಸುತ್ತಿದ್ದ ಕಳ್ಳಭಟ್ಟಿ ಅಡ್ಡೆಯ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಅಬಕಾರಿ ಮತ್ತು ಪೊಲೀಸರ ಜಂಟಿ ದಾಳಿ ನಡೆಸಿದ್ದು, ಬ್ಯಾರಲ್‌ನಲ್ಲೇ ಸಿದ್ದಪಡಿಸುತ್ತಿದ್ದ ನೂರಾರೂ ಲೀಟರ್ ಕಳ್ಳಭಟ್ಟಿ ಪತ್ತೆಯಾಗಿದೆ.
ಜಿಲ್ಲೆಯ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಇನ್ನೋರ್ವ ಪುರುಷನ ಜೊತೆ ಸೇರಿಕೊಂಡು ಕಳ್ಳಭಟ್ಟಿ ತಯಾರಿಸುತ್ತಿದ್ದರು. ದಾಳಿಯ ಸಮಯದಲ್ಲಿ ಮಹಿಳೆಯರು ಪರಾರಿಯಾಗಿದ್ದು, ಒಬ್ಬನನ್ನ ಬಂಧಿಸಲಾಗಿದೆ.
ಅಬಕಾರಿ ಉಪನಿರ್ದೇಶಕಿ ಡಾ.ಆಶಾ ಹಾಗೂ ಆಡೂರ ಠಾಣೆಯ ಪಿಎಸೈ ಅಂಜನಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, 240 ಲೀಟರ್ ಕೊಳೆಯನ್ನ ನಾಶಪಡಿಸಲಾಗಿದೆ. ಸಿದ್ಧಪಡಿಸಿದ್ದ 8 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದು ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ.