ಬಸ್ಸಲ್ಲೇ ಕಲ್ಲು ತರಿಸಿದ ಅಧಿಕಾರಿಗಳು: ಕಂಡಕ್ಟರ್-ಡ್ರೈವರ್ರೇ ಹಮಾಲಿಗಳು- ಏನ್ ಕಾಲ ಬಂತೋ…!
ಹುಬ್ಬಳ್ಳಿ: ಕೊರೋನಾ ಹಾವಳಿಯಿಂದ ಈಗಾಗಲೇ ತತ್ತರಿಸಿ ಹೋಗಿರುವ NWKRTC ಕಂಡಕ್ಟರ್ ಡ್ರೈವರ್‌ಗಳನ್ನ ಇಲಾಖೆಯ ಹಿರಿಯ ಅಧಿಕಾರಿಗಳು ಹೇಗೆ ನಡೆಸಿಕೊಳ್ಳುತ್ತಿದ್ದಾರೆಂಬುದಕ್ಕೆ ಸಾಕ್ಷಿ ದೊರೆತಿದ್ದು, ಆ ಎಕ್ಸಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ.
ಹುಬ್ಬಳ್ಳಿ-ಕುಂದಗೋಳ-ಹುಬ್ಬಳ್ಳಿ ಬಸ್‌ನಲ್ಲಿ ಪಾರ್ಕಿಂಗ್ ಕಲ್ಲುಗಳನ್ನ ಹಾಕಿಸಿಕೊಂಡು ಬರಲಾಗಿದೆ. ನೌಕರಿ ಮಾಡಬೇಕಾದ ಸಿಬ್ಬಂದಿಗಳು ನೂರಾರೂ ಕಲ್ಲುಗಳನ್ನ ಹಾಕಿಕೊಂಡು ಬಂದಿದ್ದಾರೆ.
ಸಂಸ್ಥೆಯ ಹೊಸೂರು ಕಚೇರಿಯ ಬಳಿ ಹಾಕಬೇಕಾದ ಕಲ್ಲುಗಳನ್ನ ತರಲು ಬಸ್‌ನ್ನೇ ಕೊಟ್ಟು ಕಳಿಸಿರುವ ಅಧಿಕಾರಿಗಳು, ಸಿಬ್ಬಂದಿಗಳನ್ನೇ ಕೂಲಿಯನ್ನಾಗಿ ಮಾಡಿದ್ದಾರೆ.
ಸಾರಿಗೆ ಇಲಾಖೆ ನೌಕರರ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಸರಿಯಾದ ರೀತಿಯಲ್ಲಿ ಡ್ಯೂಟಿ ಸಿಗುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಏನೇ ಹೇಳಿದರೂ ಮಾಡುವ ಸ್ಥಿತಿಗೆ ಸಿಬ್ಬಂದಿಗಳು ಬಂದಿದ್ದಾರೆ.
ಚಾಲಕ-ನಿರ್ವಾಹಕರನ್ನ ಮನಬಂದಂತೆ ನಡೆಸಿಕೊಳ್ಳುವ ಅಧಿಕಾರಿಗಳಿಗೆ ಬಹುತೇಕರು ಛೀಮಾರಿ ಹಾಕಿದ್ದು, ಸಂಬಂಧಿಸಿದವರು ತಕ್ಷಣೇ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.