ಧಾರವಾಡದಲ್ಲಿ ಜ್ಯೂಸ್ ಕುಡಿದವರು- ಸೀರೆ ಖರೀದಿಸಿದವರು ಸಂಕಷ್ಟದಲ್ಲಿ: ಯಾವ್ಯಾವ ಅಂಗಡಿಗಳು ಸೀಲ್‌ಡೌನ್ ಆಗಿವೆ ಗೊತ್ತಾ…?
ಧಾರವಾಡದ ಲಲಿತ ಭಂಡಾರಿ- ಮೆಹತಾ- ಪ್ಯಾಷನ್ ಪರಾಗ್ ಸಾರೀಸ್- ಖಾದಿ ಇಂಡಿಯಾ ಸೇರಿದಂತೆ ಹಲವು ಅಂಗಡಿಗಳು ಸೀಲ್‌ಡೌನ
ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರಮುಖ ಜನಸಂದಣಿ ಇರುವ 15 ಮಾರುಕಟ್ಟೆಗಳಲ್ಲಿ ಶೀಘ್ರವಾಗಿ ಕೊರೋನಾ ಸೋಂಕು ಪತ್ತೆ ಮಾಡುವ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಚಾಲನೆ ನೀಡಲಾಗಿದೆ. ದಿನವೊಂದಕ್ಕೆ ಸಾವಿರ ಟೆಸ್ಟ್ ನೆಡೆಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಹುಬ್ಬಳ್ಳಿಯ ದುರ್ಗದ ಬೈಲ ಬಳಿ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಾರ್ಯ ಪರಿಶೀಲಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಹತ್ತು ಸಾವಿರ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್ ಬಂದಿದ್ದು, ಅವಳಿ ನಗರದ ವಿವಿಧಡೆ ಸಾಮೂಹಿಕವಾಗಿ ಕೊರೋನಾ ಪರೀಕ್ಷೆ ನಡೆಸಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗಡಿ, ಸೂಪರ್ ಮಾರುಕಟ್ಟೆಗಳಲ್ಲಿ ಕೆಲಸ ನಿರ್ವಹಿಸುವರಿಗೆ ಟೆಸ್ಟ್ ನೆಡಸಲಾಗುತ್ತಿದೆ. ಕೋವಿಡ್ ಇರುವುದು ಪತ್ತೆಯಾದರೆ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗುವುದು.
ಆ ಪ್ರದೇಶವನ್ನು ಕಂಟೋನ್ಮೆಂಟ್ ಜೋನ್ ಎಂದು ಪರಿಗಣಿಸಿ ಸೀಲ್ ಡೌನ್ ಮಾಡಲಾಗುತ್ತದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸುರಕ್ಷತೆಯ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಕ್ರಮ ಕೈಗೊಂಡಿದೆ. ಸೋಂಕಿನ ಪ್ರಮಾಣ ತಗ್ಗುವವರೆಗೂ ಟೆಸ್ಟ್ ನಡೆಸಲಾಗುತ್ತದೆ. ಮೊದಲ ವಾರದಲ್ಲಿ ಹೆಚ್ಚಿನ ಜನಸಂದಣಿ ಮಾರುಕಟ್ಟೆಗಳಲ್ಲಿ ಯಾದೃಚ್ಛಿಕ ಮಾದರಿಯಲ್ಲಿ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನೆಡೆಸಲಾಗುವುದು. ಮೂವತ್ತು ನಿಮಿಷದಲ್ಲಿ ಪರೀಕ್ಷಾ ವರದಿಯನ್ನು ನೀಡಲಾಗುವುದು. ಸ್ಥಳದಲ್ಲಿ ಆಬ್ಯುಲೆನ್ಸ್ ಮಾಡಲಾಗಿದ್ದು, ಸೋಂಕು ಪತ್ತೆಯಾದವರನ್ನು ಒಂದು ಗಂಟೆಯ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗುವುದು.
ಜಿಲ್ಲೆಯಲ್ಲಿ ವೆಂಟಿಲೇಟರ್ ಗಳ ಕೊರತೆ ಇಲ್ಲ. 17 ವೆಂಟಿಲೇಟರ್ ಗಳನ್ನು ಬಳಸಿಕೊಳ್ಳಲಾಗಿದೆ. 15 ವೆಂಟಿಲೇಟರ್ ಲಭ್ಯ ಇವೆ. ಹೊಸದಾಗಿ 30 ವೆಂಟಿಲೇಟರ್ ಸರ್ಕಾರದಿಂದ ಬಂದಿದ್ದು ಅಳವಡಿಕೆಯ ಕಾರ್ಯ ನಡೆಯುತ್ತಿದೆ. ಶೀಘ್ರವಾಗಿ ಇವು ಬಳಕೆಗೆ ಲಭ್ಯವಾಗಲಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಐ.ಸಿ.ಯು ಹಾಗೂ ವೆಂಟಿಲೇಟರ್ ಗಳು ಖಾಲಿ ಇವೆ. ಲಕ್ಷಣ ರಹಿತ ಕೊವೀಡ್ ರೋಗಿಗಳನ್ನು ದಾಖಲಿಸಲು 1200 ಹಾಸಿಗೆಗಳು ಸಜ್ಜುಗೊಳಿಸಲಾಗಿದೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಕೊವೀಡ್ ಪತ್ತೆಯಾದ ಅಂಗಡಿಗಳನ್ನು ಈ ಸಂದರ್ಭದಲ್ಲಿ ಸೀಲ್ ಡೌನ್ ಮಾಡಲಾಯಿತು.
ಜಿ.ಪಂ. ಸಿಇಓ ಡಾ.ಬಿ.ಸಿ ಸತೀಶ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಡಿ.ಸಿ.ಪಿ ಕೃಷ್ಣಕಾಂತ್, ಜಿಲ್ಲಾ ವೈದ್ಯಾಧಿಕಾರಿ ಯಶವಂತ ಮದೀನಕರ್, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ್ ನಾಸಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.