2010ರ ಬ್ಯಾಚಿನ ಪಿಎಸೈ ಆತ್ಮಹತ್ಯೆ: ಏನಿದು ಪ್ರಕರಣ- ನಡೀತಿದೆ ತನಿಖೆ
ಹಾಸನ: ಜಿಲ್ಲೆಯ ಚೆನ್ನರಾಯಪಟ್ಟಣದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಿಖರವಾದ ಕಾರಣ ಗೊತ್ತಾಗಿಲ್ಲ.
2010 ಬ್ಯಾಚಿನ ಜೆ.ಎಂ.ಕಿರಣಕುಮಾರ ಎಂಬ ಪಿಎಸೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚನ್ನರಾಯಪಟ್ಟಣದ ಶಹರ ಠಾಣೆಯಲ್ಲಿ ಕಾರ್ಯನಿರ್ಹಹಣೆ ಮಾಡುತ್ತಿದ್ದ ಕಿರಣಕುಮಾರ, ಸಾರ್ವಜನಿಕರೊಂದಿಗೆ ಅತೀವ ಸಂಪರ್ಕ ಹೊಂದಿದ್ದರು.
ಬಡವರ ಬಗ್ಗೆಯೂ ಕಾಳಜಿ ಹೊಂದಿದ್ದ ಕಿರಣಕುಮಾರ ಆತ್ಮಹತ್ಯೆ ಮಾಡಿಕೊಂಡಿರುವುದು ತಾಲೂಕಿನ ಜನರನ್ನ ಬೆಚ್ಚಿಬೀಳಿಸಿದೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಚನ್ನರಾಯಪಟ್ಟಣದ ಪಿಎಸ್ಐ ಆತ್ಮಹತ್ಯೆಗೆ ಶರಣಾಗಿದ್ದು ಏಕೆ?
ಕಳೆದ 2ದಿನಗಳಿಂದ ನಡೆದ ಕೊಲೆಗೂ ಪಿಎಸ್ಐ ಆತ್ಮಹತ್ಯೆಗೂ ಇದ್ಯಾ ಸಂಬಂಧ?
ಆತ್ಮಹತ್ಯೆಗೂ ಮುನ್ನ ತಮ್ಮ ಸಹೋದ್ಯೋಗಿ ಜೊತೆ ಏನಂದಿದ್ರೂ ಪಿಎಸ್ಐ
ಅದೊಂದು ವಾಟ್ಸಾಪ್ ಮೆಸೆಜ್ ನಿಂದ ಜೀವ ಕಳೆದುಕೊಂಡ್ರಾ ಚನ್ನರಾಯಪಟ್ಟಣ ಪಿಎಸ್ಐ?
ಯಾವುದಾ ಮೆಸೆಜ್? ತಮ್ಮ ಸಹೋದ್ಯೋಗಿ ಜೊತೆ ಅಸಲಿಗೆ ಅವರು ಹೇಳಿಕೊಂಡಿದ್ದೇನು?
ಆತ್ಮಸ್ಥೈರ್ಯ ಕಳೆದುಕೊಂಡು ದುಡುಕಿ ಜೀವ ಕಳೆದುಕೊಂಡ ಪಿಎಸ್ಐ
ನಿನ್ನೆ, ಮೊನ್ನೆ ಎರಡು ದಿನ ಚನ್ನರಾಯಪಟ್ಟಣದಲ್ಲಿ ಇಬ್ಬರ ಹತ್ಯೆಯಾಗಿತ್ತು
ಇದೇ ಒತ್ತಡದಲ್ಲಿ ಕಳೆದೆರಡು ದಿನಗಳಿಂದ ಆರೋಪಿಗಳ ಜಾಡು ಹಿಡಿದಿದ್ದ ಇನ್ಸ್ಪೆಕ್ಟರ್
ಇಂದು ಚನ್ನರಾಯಪಟ್ಟಣಕ್ಕೆ ಐಜಿ-ಎಸ್ಪಿ ಭೇಟಿ ಹಿನ್ನಲೆ
ತಮ್ಮ ಸಹೋದ್ಯೋಗಿಯೊಟ್ಟಿಗೆ ನಮ್ಮನ್ನ ಸಸ್ಪೆಂಡ್ ಮಾಡಿ ಬಿಡ್ತಾರೆ ಎಂದು ಹೇಳಿಕೊಂಡಿದ್ದ ಪಿಎಸ್ಐ
ಚನ್ನರಾಯಪಟ್ಟಣದ ಕೆಲ ವಾಟ್ಸಾಪ್ ಗ್ರೂಪ್ಗಳಲ್ಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಮೆಸೇಜ್ ಹರಿಬಿಡಲಾಗಿತ್ತು
ಈ ಬಗ್ಗೆ ಅಸಮಾಧಾನ ಹೊರಹಾಕಿದ್ರಂತೆ ಕಿರಣ್ ಕುಮಾರ್
ನಮ್ಮನ್ನ ಅಮಾನತ್ತು ಮಾಡ್ತಾರೆ ಅಂತಾ ಗಾಭರಿಗೆ ನೇಣಿಗೆ ಶರಣಾಗಿಬಿಟ್ರಾ ಕಿರಣ್ ಕುಮಾರ್
ಪೊಲೀಸ್ ಮೂಲಗಳಿಂದ ಈ ಬಗ್ಗೆ ಮಾಹಿತಿ ಲಭ್ಯ
ಚನ್ನರಾಯಪಟ್ಟಣ ಪಿಎಸ್ಐ ಕಿರಣ್ ಕುಮಾರ್ ಆತ್ಮಹತ್ಯೆಗೆ ಶರಣು
ಕಳೆದ ಎರಡು ದಿನಗಳಿಂದ ಚನ್ನರಾಯಪಟ್ಟಣದಲ್ಲಿ 2 ಕೊಲೆ ಸಂಭವಿಸಿತ್ತು
ಬೆಳಗ್ಗೆಯಷ್ಟೇ ಆರೋಪಿಗಳ ಹುಡುಕಾಟದಲ್ಲಿ ತೊಡಗಿ ಮನೆಗೆ ತೆರಳಿದ್ದ ಪಿಎಸ್ಐ
ಮನೆಯಲ್ಲಿ ನೇಣಿಗೆ ಶರಣಾಗಿದ್ದ ಕಿರಣ್ ಕುಮಾರ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು
ಚಿಕ್ಕವಯಸ್ಸಿನಲ್ಲೇ ಜೀವಕಳೆದುಕೊಂಡ ಪಿಎಸ್ಐ ಕಿರಣ್ ಕುಮಾರ್