ಎಸ್ಪಿಯಾಗಿದ್ದ ಸಂಧಿಗವಾಡ ಒಂದೇ ದಿನಕ್ಕೆ ಇಲಾಖೆಯನ್ನೇ ಬಿಟ್ರು..! ಯಾಕೆ ಗೊತ್ತಾ..?
ದಾವಣಗೆರೆ: ಹುಬ್ಬಳ್ಳಿ-ಧಾರವಾಡದಲ್ಲಿ ಬಹುತೇಕ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದ ಹುಬ್ಬಳ್ಳಿ ಸಂಚಾರಿ ವಿಭಾಗದ ಎಸಿಪಿಯಾಗಿದ್ದ ಎಸ್.ಎಂ.ಸಂಧಿಗವಾಡ ನಿನ್ನೆಯಷ್ಟೇ ಪ್ರಮೋಷನ್‌ಗೊಂಡಿದ್ದರು.
ಹುಬ್ಬಳ್ಳಿಯ ನಿವಾಸಿಯಾಗಿರುವ ಸಂಧಿಗವಾಡ ಅವರು ಪ್ರಮೋಷನ್ ಆದ ಬೆನ್ನಲ್ಲೇ ಇಂದು ದಾವಣಗೆರೆಯ ಎಸಿಪಿ ಎಸ್ಪಿಯಾಗಿ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ್ದರು. ಬೆಳಗ್ಗೆ ಅಧಿಕಾರ ಸ್ವೀಕರಿಸಿ ಸಂಜೆಯಷ್ಟೇ ಅಧಿಕಾರದಿಂದ ನಿರ್ಗಮಿಸಿದರು.
ನಿವೃತ್ತಿಯಂಚಿನಲ್ಲಿದ್ದ ಸಂಧಿಗವಾಡ ಒಂದೇ ಒಂದು ದಿನದ ಆರು ಗಂಟೆಯಷ್ಟೇ ಎಸ್ಪಿಯಾಗಿ ನಿವೃತ್ತಿಯಾಗಿದ್ದಾರೆ.
ಡಿಎಸ್ಪಿ ಲೋಕೇಶ, ಗಂಗಲ್ ಹಾಗೂ ಪರಮೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು