Posts Slider

Karnataka Voice

Latest Kannada News

ನಿವೃತ್ತಿ ಸಮಯದಲ್ಲೂ ಮಾನವೀಯ ಗುಣ ತೋರಿದ ಸಾರಿಗೆ ನಿಯಂತ್ರಕ

Spread the love

*ವಾಕರಸಾಸಂಸ್ಥೆ ಹುಬ್ಬಳ್ಳಿ ವಿಭಾಗ: ಸೇವಾ ನಿವೃತ್ತಿಯ ದಿನದಂದು 400 ಮಾಸ್ಕ್ ಮತ್ತು 400 ಔಷಧೀಯ ಸಸ್ಯಗಳನ್ನು ವಿತರಿಸಿದ ಸಾರಿಗೆ ನಿಯಂತ್ರಕರಿಗೆ ಅಭಿನಂದನೆ*

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಶುಕ್ರವಾರ ಸೇವಾ ನಿವೃತ್ತಿ ದಿನದಂದು 400 ಮಾಸ್ಕ್ ಗಳನ್ನು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ವಿವಿಧ ಬಗೆಯ 400 ಔಷಧೀಯ ಸಸಿಗಳನ್ನು ವಿತರಿಸುವ ಮೂಲಕ ವಿನೂತನ ರೀತಿಯಲ್ಲಿ ಕೊರೋನಾ ವೈರಸ್ ಸೋಂಕು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಿದ ಸಾರಿಗೆ ನಿಯಂತ್ರಕ ಸಿ.ಎಂ.ಯಳಲಿಯವರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಗೌರವಿಸಿ ಅಭಿನಂದಿಸಿದ್ದಾರೆ.


ಚನ್ನಬಸಪ್ಪ ಮಹಾದೇವಪ್ಪ ಯಳಲಿಯವರು 1982 ರಲ್ಲಿ ಸಾರಿಗೆ ಸಂಸ್ಥೆಗೆ ನಿರ್ವಾಹಕರಾಗಿ ಸೇರಿ 2008ರಲ್ಲಿ ಪದೋನ್ನತಿ ಹೊಂದಿ ಸಾರಿಗೆ ನಿಯಂತ್ರಕರಾಗಿ ಸೇವೆ ಸಲ್ಲಿಸಿ ಜುಲೈ 31ರಂದು ವಯೋನಿವೃತ್ತಿ ಹೊಂದಿದ್ದಾರೆ. ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಅವರಿಗೆ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಸರಳ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳಿಗೆ ಯಳಲಿ ಹಾಗೂ ಅವರ ಪುತ್ರ ರುದ್ರಪ್ಪ ಸೇರಿಕೊಂಡು ಮರು ಬಳಸಬಹುದಾದ 400 ಮಾಸ್ಕ್ ಗಳನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಒಂದೆಲಗ( ಬ್ರಾಹ್ಮಿ), ದೊಡ್ಡಪತ್ರೆ, ರಾಮ ತುಳಸಿ,ಕೃಷ್ಣ ತುಳಸಿ, ಶಂಕರ ಪುಷ್ಟಿ, ಲೋಳೆಸರ, ಗರುಡ ಪಾತಾಳ, ಕಹಿಬೇವು ಹಾಗೂ ಇನ್ನಿತರ ವಿವಿಧ ಬಗೆಯ 400 ಔಷಧೀಯ ಸಸಿಗಳನ್ನು ವಿತರಿಸಿದರು.


ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರಲು ಹಿಂಜರಿಯುತ್ತಿರುವ ಸಂದರ್ಭದಲ್ಲಿ ಯಾವುದೇ ರಜೆಯನ್ನು ತೆಗೆದುಕೊಳ್ಳದೆ ನಿವೃತ್ತಿಯ ಅಂತಿಮ ದಿನದವರೆಗೂ ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ದಿನದಂದು ಇಷ್ಟೊಂದು ಪ್ರಮಾಣದಲ್ಲಿ ಮಾಸ್ಕ್ ಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ವಿತರಿಸುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಶ್ಲಾಘಿಸಿದ್ದಾರೆ. ನಿಲ್ದಾಣಾಧಿಕಾರಿ ಕೋಟೂರ, ಪಿ ಎಸ್ ಶೆಟ್ಟರ, ಸಾರಿಗೆ ನಿಯಂತ್ರಕರುಗಳು, ಸಿಬ್ಬಂದಿ, ಯಳಲಿಯವರ ಸಂಬಂಧಿಕರು, ಗ್ರಾಮಸ್ಥರು ಇದ್ದರು.


Spread the love

Leave a Reply

Your email address will not be published. Required fields are marked *