ಪೂಜೆಗೆ ಬಂದಿದ್ದವಳನ್ನೇ ಅತ್ಯಾಚಾರ ಮಾಡಿದ ಬಸೀರ್: ಧಾರವಾಡ ಜಿಲ್ಲೆಯಲ್ಲಿ ಮೃಗೀಯ ಘಟನೆ
ಧಾರವಾಡ ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ಘಟನೆ: ಅತ್ಯಾಚಾರಕ್ಕೊಳಗಾದೆ ಎಂದು ಆತ್ಮಹತ್ಯೆಗೆ ಶರಣಾದ ಬಾಲಕಿ
ಧಾರವಾಡ: ತಾಲೂಕಿನ ಬೋಗೂರು ಗ್ರಾಮದಲ್ಲಿ ಗುರುವಾರ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. 14 ವರ್ಷದ ಬಾಲಕಿ ಮೇಲೆ ಸಿಂಗನಳ್ಳಿ ಗ್ರಾಮದ ಬಸೀರ್ ಗಡಾದವರ ಎಂಬಾತ ಕಳೆದ ಅತ್ಯಾಚಾರ ನಡೆಸಿದ್ದ. ಇದರಿಂದ ಮನನೊಂದು ಆ ಬಾಲಕಿ ಶುಕ್ರವಾರ ಕ್ರಿಮಿನಾಶಕ ಕುಡಿದಿದ್ದಳು. ಚಿಕಿತ್ಸೆ ಫಲಿಸದೇ ಬಾಲಕಿ ಇಂದು ಅಸುನೀಗಿದ್ದಾಳೆ.
y
ಬೋಗುರ ಗ್ರಾಮದ ಬಾಲಕಿ ಗುರುವಾರ ಹೊಲಕ್ಕೆ ಪೂಜೆ ಮಾಡಲು ಹೋಗಿದ್ದ ವೇಳೆ, ಆಕೆಯನ್ನು ಹೊತ್ತೊಯ್ದು ಬಸೀರ್ ಅತ್ಯಾಚಾರವೆಸಗಿದ್ದಾನೆ. ಈ ಘಟನೆಯನ್ನು ಮರುದಿನ ಕ್ರಿಮಿನಾಶಕ ಕುಡಿದು ಘಟನೆಯನ್ನ ತನ್ನ ಮನೆಯಲ್ಲಿ ಹೇಳಿದ್ದಾಳೆ. ಕೂಡಲೇ ಆಕೆಯನ್ನು ಚನ್ನಮ್ಮನ ಕಿತ್ತೂರಿಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು. ಅಲ್ಲಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದರಿಂದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಪೂಜಾ ಅಸುನೀಗಿದ್ದಾಳೆ. ಆರೋಪಿ ಬಸೀರನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಬಾಲಕಿಯ ಪೋಷಕರು ಒತ್ತಾಯಿಸಿದ್ದಾರೆ.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬಾಲಕಿಯ ಕಡೆಯವರು ಜಮಾಯಿಸಿದ್ದರು. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.