ಬೈಕ್-ಆಟೋ ಮೇಲೆ ಬಿದ್ದ ಮರ: ವೆಹಿಕಲ್ನಲ್ಲಿದ್ದವರು ಹೇಗೆ ಪಾರಾದ್ರು ಗೊತ್ತಾ…! Exclusive
ಧಾರವಾಡ: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಿಬಿಟಿ ಬಳಿಯ ಬೃಹದಾಕಾರದ ಮರವೊಂದು ಬಿದ್ದ ಪರಿಣಾಮ ಆಟೋ ಮತ್ತು ಬೈಕ್ನ ಮೇಲೆ ಬಿದ್ದ ಎರಡು ವೆಹಿಕಲ್ಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಮೆಹಬೂಬ ಎಂಬ ಮಾಲೀಕನಿಗೆ ಸೇರಿದ ಆಟೋ ಹಾಗೂ ಸಂಗಮೇಶ ಎಂಬಾತರಿಗೆ ಸೇರಿದ ಬೈಕ್ ಸಂಪೂರ್ಣ ಜಖಂಗೊಂಡಿವೆ.
ಆಟೋದ ಬಳಿ ನಿಂತು ಮಾತನಾಡುತ್ತಿದ್ದ ಸಂಗಮೇಶ ಒಮ್ಮೇಲೆ ಮರ ಬೀಳುತ್ತಿರುವುದನ್ನ ನೋಡಿ ಬೈಕ್ನ್ನ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಆಟೋ ಡ್ರೈವರ್ ಮೆಹಬೂಬ ಕೂಡಾ ಶಬ್ಧ ಕೇಳಿ ಹಿಂದೆ ಸರಿದಿದ್ದಾನೆ.
ಇಬ್ಬರು ಸಮಯಪ್ರಜ್ಞೆ ಮೆರೆದ ಪರಿಣಾಮ ಇಬ್ಬರು ಪ್ರಾಣ ಉಳಿಸಿಕೊಂಡಿದ್ದಾರೆ.
ಅಕ್ಕಪಕ್ಕದವರು ಕೂಡಾ ಗಾಬರಿಯಾಗಿ ಓಡಿ ಹೋಗಿದ್ದಾರೆ.