ಕುಟುಂಬದಲ್ಲಿದ್ದ ನಾಲ್ವರನ್ನೂ ಕತ್ತರಿಸಿದ ಮಾನಸಿಕ ಅಸ್ವಸ್ಥ: ಥಳಿಸಿ ಪೊಲೀಸರಿಗೊಪ್ಪಿಸಿದ ಜನ
ಮಂಜೇಶ್ವರ: ಎಲ್ಲರೂ ಕೂಡಿಕೊಂಡು ರಾತ್ರಿ ಊಟ ಮಾಡಿ ಇನ್ನೇನು ಮಲಗಬೇಕು ಎನ್ನೋವಷ್ಟರಲ್ಲೇ ಹರಿತವಾದ ಆಯುಧ ಹಿಡಿದು ಬಂದ ಸಂಬಂಧಿಯೋರ್ವ ಮನೆಯಲ್ಲಿದ್ದ ನಾಲ್ವರನ್ನೂ ಕತ್ತರಿಸಿ ಕೊಲೆ ಮಾಡಿದ ಘಟನೆ ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಎಂಬಲ್ಲಿ ಸಂಭವಿಸಿದೆ.
ಒಂದೇ ಕುಟುಂಬದ ಬಾಬು, ವಿಠ್ಠಲ, ಸದಾಶಿವ ಮತ್ತು ದೇವಕಿ ಎಂಬುವವರೇ ಕೊಲೆಯಾದ ದುರ್ದೈವಿಗಳು. ಇವರ ಸಂಬಂಧಿಯಾದ ಉದಯ ಎಂಬಾತನೇ ಮನೆಯೊಳಗೆ ಬೆನ್ನು ಬಿದ್ದು ಕೊಲೆ ಮಾಡಿದ್ದಾನೆ. ಇಡೀ ಮನೆ ರಕ್ತದ ಕಲೆಗಳಿಂದ ತುಂಬಿ ಹೋಗಿದ್ದು, ಶವಗಳು ಮನೆಯ ಒಂದೊಂದು ಭಾಗದಲ್ಲಿ ಬಿದ್ದಿವೆ.
ಉದಯ ಮಾಡಿದ ಆವಾಂತರದಿಂದ ಬೆಚ್ಚಿಬಿದ್ದವರು ಆತ ಹೊರಗೆ ಬರುತ್ತಿದ್ದ ಹಿಡಿದು ಕಾಲಿಗೆ ಹಗ್ಗ ಬಿಗಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಉದಯ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದ್ದು, ಕೊಲೆಯ ಹಿನ್ನೆಲೆ ಏನು ಎಂಬುದನ್ನ ತಿಳಿಯಬೇಕಿದೆ. ಮಂಜೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಯನ್ನ ಸುಪರ್ಧಿಗೆ ತೆಗೆದುಕೊಂಡಿದ್ದಾರೆ.