Posts Slider

Karnataka Voice

Latest Kannada News

ಮಂದಿರ ಶಂಕುಸ್ಥಾಪನೆ ಸಮಯದಲ್ಲೇ “ಆ” ಸ್ವಾಮೀಜಿಗೆ ಮತ್ತೆ ಜೀವ ಬೆದರಿಕೆ: ಸರಕಾರವಿದ್ದಾಗಲೂ ‘ಕಾವಿ’ಗೆ ರಕ್ಷಣೆಯಿಲ್ಲ

Spread the love

ಬೆಂಗಳೂರು: ಗದಗ ಜಿಲ್ಲೆಯ ಮುಂಡರಗಿ ಅನ್ನದಾನೇಶ್ವರ ಮಠದ ಶ್ರೀ ನಿಜಗುಣಾನಂದ ಶ್ರೀಗಳಿಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. ನಿರಂತರವಾಗಿ ನಡೆಯುತ್ತಿರುವ ಈ ಬೆದರಿಕೆಗೆ ಕಡಿವಾಣ ಹಾಕಲು ಇಲ್ಲಿಯವರೆಗೆ ಕೇಸರಿ ಪಡೆಯ ಸರಕಾರಕ್ಕೆ ಆಗದಿರುವುದು ಹಲವರಲ್ಲಿ ಸಂಶಯ ಮೂಡಿಸಿದೆ.
ಪುರೋಹಿತ ಶಾಹಿಗಳನ್ನು ವಿರೋಧಿಸಿ ಅಸಮಾನತೆ ಸಾರುವ ಅವರ ಆಚರಣೆಗಳನ್ನು ಧಿಕ್ಕರಿಸಿ ಸಮ ಸಮಾಜ ಕಟ್ಟಲು ಹೋರಾಡಿದ ಬುದ್ದನ ಕಾಲದಲ್ಲಿಯೂ ಜನ ಸಾಮಾನ್ಯರಿಗೆ ಪುರೋಹಿತರ ನೀಚತನ ಅರ್ಥವಾಗದಿದ್ದಕ್ಕೆ ಬುದ್ದನ ಅಂತ್ಯವಾಯಿತು.
12ನೇ ಶತಮಾನದಲ್ಲಿ ಪುರೋಹಿತರ ನೀಚತನ ವಿರೋಧಿಸಿ ಎಲ್ಲರ ಕೈಗೂ ಆತ್ಮಲಿಂಗವನ್ನು ಕೊಟ್ಟ ಅಣ್ಣ ಬಸವಣ್ಣನನ್ನು ಇದೇ ಪುರೋಹಿತ ಶಾಹಿಗಳು ಕೊಲೆ ಮಾಡಿ ನದಿಯಲ್ಲಿ ಬಿಸಾಕಿ ಹೋದರು. ಆವಾಗಲೂ ಜನಸಾಮಾನ್ಯರು ಸುಮ್ಮನಿದ್ದರು.
ಇನ್ನೂ ನಮ್ಮ ಕಾಲಕ್ಕೆ ಧರ್ಮದ ಹೆಸರಲ್ಲಿ ನಡೆಯುವ ಅನಾಚಾರಗಳನ್ನು ಪ್ರಶ್ನಿಸಿದ. M M ಕಲಬುರಗಿ, ಗೌರಿ ಲಂಕೇಶ್, ಪನ್ಸಾರೆ, ದಾಬೋಲ್ಕರ್ ಇನ್ನೂ ಹಲವಾರು ವಿಚಾರವಾದಿಗಳನ್ನು ಹೊಡೆದು ಸಾಯಿಸಿದರು. ಅಂತಹ ಸಂದರ್ಭದಲ್ಲಿಯೂ ಜನಸಾಮಾನ್ಯರಿಗೆ ಸಂತಾಪ ಸೂಚಿಸುವುದು ಬಿಟ್ಟು ಇನ್ನೇನು ಮಾಡಲು ಸಾಧ್ಯವಾಯಿತು ?
ಸಾವಿರಾರು ವರ್ಷಗಳ ಕಾಲ ಈ ದೇಶದ ಮೂಲ ನಿವಾಸಿಗಳಾದ ಶೂದ್ರ {OBC} ಮತ್ತು ಅತಿ ಶೂದ್ರರಾದ {SC &ST} ಗಳಿಗೆ ಶಿಕ್ಷಣ‌, ಆಸ್ತಿ‌, ಅಧಿಕಾರಿ ನಿರಾಕರಿಸಿದ ಬ್ರಾಹ್ಮಣಶಾಹಿಗಳು. ಈಗ ಬಾಬಾ ಸಾಹೇಬರು ಕೊಟ್ಟ ಸಂವಿಧಾನದತ್ತವಾಗಿ ದೊರೆತ ಹಕ್ಕುಗಳನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ. ಮತ್ತೆ ಅವರ ಅನಾಚಾರಗಳನ್ನು ವಿರೋಧಿಸಿದವರಿಗೆ ಕೊಲ್ಲಲು ಹೊರಟಿದ್ದಾರೆ. ನಮಗೆ ಈಗ ದಕ್ಕಿರುವ ಹಕ್ಕುಗಳು ಹಲವಾರು ಮಹಾತ್ಮರು ಜೀವ ಮತ್ತು ಜೀವನವನ್ನೇ ತ್ಯಾಗ ಮಾಡಿ ತಂದು ಕೊಟ್ಟಿದ್ದು. ಈಗ ಸುಮ್ಮನಿದ್ದರೆ ಮತ್ತೆ ಶಿಕ್ಷಣದಿಂದ ವಂಚಿತರಾಗಿ, ಅಧಿಕಾರ ಹೀನರಾಗಿ ಗುಲಾಮರಿಯತ್ತ ಸಾಗಿಸುವ ವ್ಯವಸ್ಥೆ ನಮ್ಮ ಕಣ್ಣ ಮುಂದೆಯೆ ನಿರ್ಮಾಣವಾಗುತ್ತಿದೆ.
ಸಮಾಜದಲ್ಲಿ ದಬ್ಬಾಳಿಕೆ ದೌರ್ಜನ್ಯ ಹೆಚ್ಚಾಗುತ್ತಿರುವುದು ದುಷ್ಟರ ದುಷ್ಟತನದಿಂದಲ್ಲ ಒಳ್ಳೆಯವರ ಮೌನದಿಂದ.
ಲಿಂಗಾಯತರ ಮಹಾನಾಯಕನಂತೆ ವರ್ತಿಸುವ ಮತ್ತು ತಮ್ಮ ನಂತರವೂ ಲಿಂಗಾಯತರೇ ಮುಖ್ಯಮಂತ್ರಿ ಆಗಬೇಕು ಎನ್ನುವ ಯಡಿಯೂರಪ್ಪನವರೂ ಬಸವಣ್ಣನವರಷ್ಟೆ ಗಟ್ಟಿ ಧ್ವನಿಯಲ್ಲಿ ಲಿಂಗಾಯತ ಮತದ ತತ್ವ ಚಿಂತನೆಗಳನ್ನು ಹೇಳ ಹೊರಟಿರುವ ಶ್ರೀ ನಿಜಗುಣಾನಂದ ಶ್ರೀಗಳಿಗೆ ಉನ್ನತ ಮಟ್ಟದ ರಕ್ಷಣೆ ಒದಗಿಸಿ, ನಿರಂತರವಾಗಿ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *