ಯಾರ‌್ದೋ ದುಡ್ಡಿಗೆ ಗೌರಿ ಬೆಟಾಲಿಯನ್ ಪ್ರಚಾರ: ಶೆಟ್ಟರ ಗರಂ- ಜಿಲ್ಲಾಡಳಿತದಿಂದ ಕಾನೂನು ಕ್ರಮ
ಧಾರವಾಡ: ರಾಜ್ಯ ಸರಕಾರ ಕೊಡಮಾಡುವ ಆಯುಷ್ ಇಲಾಖೆಯ ಕಿಟ್‌ಗಳನ್ನ ಸರಕಾರದ ಪ್ರತಿನಿಧಿಗಳು ಅಥವಾ ಅಧಿಕಾರಿಗಳು ಕೊಡುವುದು ನಿಯಮ. ಆದರೆ, ಕಾಂಗ್ರೆಸ್‌ನವರು ಅದನ್ನೇ ತಮ್ಮ ಜಾಹೀರಾತು ಮಾಡಿಕೊಂಡು ತಿರುಗುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿಂದು ಸಭೆ ನಡೆಸಿದ ಸಮಯದಲ್ಲಿ ಕಾಂಗ್ರೆಸ್‌ನ ಕೆಲವರು ಆಯುಷ್ಯ ಇಲಾಖೆಯ ಬಗ್ಗೆ ಜಾಹೀರಾತು ಹಾಕಿಕೊಂಡು ಅಲೆದಾಡುತ್ತಿದ್ದಾರೆ. ಈ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಅವರಿಗೆ ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿದ್ದು, ಈ ಬಗ್ಗೆ ಅವರೇ ಕಾನೂನು ಕ್ರಮ ಜರುಗಿಸುತ್ತಾರೆಂದು ಶೆಟ್ಟರ ಹೇಳಿದರು.
ಕೊರೋನಾ ಸಮಯದಲ್ಲಿ ಸರಕಾರದ ಯೋಜನೆಗಳನ್ನು ಪ್ರಚಾರಕ್ಕೆ ಬಳಕೆ ಮಾಡಿ ಈಗಾಗಲೇ ಕೆಲವು ಜಾಹೀರಾತು ಬಂದಿರುವುದು ಮತ್ತೂ ಪ್ರಚಾರದ ಕರಪತ್ರಗಳನ್ನು ಹಂಚಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಶಾಸಕ ಅಮೃತ ದೇಸಾಯಿ ಉಪಸ್ಥಿತರಿದ್ದರು.