ಕೊರೋನಾ ಗೆದ್ದು ಬಂದ ಪೊಲೀಸರಿಗೆ ಏನು ಮಾಡಿದ್ರು ಗೊತ್ತಾ…?
ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಅಪರೂಪದ ಸಮಯವೊಂದು ಕಳೆದು ಹೋಯಿತು. ಅವರ‌್ಯಾವತ್ತು ಇಂತಹ ದಿನ ತಮ್ಮ ಜೀವನದಲ್ಲಿ ಬರುತ್ತೆ ಎಂದುಕೊಂಡಿರಲೇ ಇಲ್ಲ. ಅದೇನು ಆಯಿತು ಗೊತ್ತಾ… ಇದನ್ನ ಪೂರ್ಣವಾಗಿ ಓದಿ.
ನವಲಗುಂದ ಠಾಣೆಯ ರಮೇಶ ಭಗವತಿ ದಂಪತಿಗಳಿಬ್ಬರು ಕೊರೋನಾ ವಾರಿಯರ್ಸ್. ಡ್ಯೂಟಿ ಮಾಡುತ್ತಲೇ ಇಬ್ಬರಿಗೂ ಕೊರೋನಾ ವೈರಸ್ ತಗುಲಿತ್ತು. ಹಾಗಂತ, ಅವರಿಬ್ಬರು ಎದೆಗುಂದಲಿಲ್ಲ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಮುಂದಾದರು.
ದಂಪತಿಗಳ ಸಮಯಪ್ರಜ್ಞೆ ಮತ್ತು ಒಬ್ಬರ ಮೇಲೇ ಮತ್ತೋಬ್ಬರ ಕಾಳಜಿಯಿಂದ ಇಬ್ಬರು ಗುಣಮುಖರಾಗಿ ಮರಳಿದ್ದಾರೆ.
ದಂಪತಿಗಳ ಆಗಮನವನ್ನ ನವಲಗುಂದ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ ಮಠಪತಿ ಸಂಭ್ರಮವನ್ನಾಗಿ ಮಾರ್ಪಡಿಸಿದ್ದರು.
ಭಗವತಿ ದಂಪತಿಗಳಿಗೆ ಶಾಲು ಮಾಲೆ ಹಾಕುವ ಮೂಲಕ ಆತ್ಮೀಯತೆಯಿಂದ ಸ್ವಾಗತಿಸಲಾಯಿತು. ಪಿಎಸೈ ಜಯಪಾಲ ಪಾಟೀಲ ತಮ್ಮ ಸಿಬ್ಬಂದಿಗಳನ್ನ ಆದರದಿಂದ ಬರಮಾಡಿಕೊಂಡರು.
ಕೊರೋನಾ ವಿರುದ್ಧ ಹೋರಾಡುತ್ತಲೇ ಕೊರೋನಾ ಅಂಟಿಸಿಕೊಂಡು, ಅದರ ವಿರುದ್ಧವೂ ಜಯಗಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾದ ದಂಪತಿಗಳು ಆರೋಗ್ಯವಾಗಿರಲಿ ಎಂದು ಎಲ್ಲರೂ ಹಾರೈಸಿದರು.