Posts Slider

Karnataka Voice

Latest Kannada News

ಜಿಮ್ ಆರಂಭ: ಸರಕಾರದ ಮಾರ್ಗಸೂಚನೆಗಳೇನು ತಿಳಿಬೇಕಾ…?

Spread the love

ಬೆಂಗಳೂರು: ಕೊರೋನಾ ವೈರಸ್ ಹರಡುವಿಕೆ ಆರಂಭವಾದಾಗಿನಿಂದ ಬಂದ್ ಆಗಿದ್ದ ಜಿಮ್ ಫಿಟ್ನೆಸ್ ಕೇಂದ್ರಗಳನ್ನು ಪುನರಾರಂಭಿಸಲು ಸರಕಾರ ಮುಂದಾಗಿದ್ದು, ಈ ಬಗ್ಗೆ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.
ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಸಿಟಿ ರವಿ ಅವರಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಜಿಮ್‌ನಲ್ಲಿ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನ ವಿವರವಾಗಿ ತಿಳಿಸಿದ್ದಾರೆ.
ಜಿಮ್‌ಗೆ ಬಂದ ವ್ಯಕ್ತಿಗೆ ಕೊರೋನಾ ಲಕ್ಷಣ ಕಂಡು ಬಂದರೇ ತಕ್ಷಣವೇ ಅವರನ್ನ ಬೇರೆ ರೂಮ್‌ನಲ್ಲಿ ಕೂಡಿಸಿ, ಆರೋಗ್ಯ ಇಲಾಖೆಗೆ ಮಾಹಿತಿ ಕೊಡುವಂತೆ ಕೇಳಿಕೊಳ್ಳಲಾಗಿದೆ.
ಚಿತ್ರನಟ ದುನಿಯಾ ವಿಜಿ ಸೇರಿದಂತೆ ಹಲವರು ಜಿಮ್ ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಕೇಂದ್ರ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಜಿಮ್ ಆರಂಭಿಸಿ ಮಾರ್ಗಸೂಚಿ ಹೊರಡಿಸಲಾಗಿದೆ.

* ಜಿಮ್-ಫಿಟ್ನೆಸ್ ಕೇಂದ್ರದ ವ್ಯವಸ್ಥಾಪಕರು ಬಳಕೆದಾರರು ಹಾಗೂ ಸಿಬ್ಬಂದಿಗೆ ಅಗತ್ಯ ಸಂಖ್ಯೆಯ ಪಾರದರ್ಶಕ ಮುಖ ಕವಚ, ಒಂದು ಬಾರಿ ಬಳಕೆ ಮಾಸ್ಟ್, ಸೋಂಕು ನಿವಾರಕಗಳ ವ್ಯವಸ್ಥೆ ಸಲ್ಲಿಸತಕ್ಕದ್ದು, ಪಾರದರ್ಶಕ ಮುಖ ಕವಚಗಳನ್ನು ಒಮ್ಮೆ ಬಳಸಿದ ನಂತರ ಸೋಂಕು ನಿವಾರಕ ಗಳಿಂದ ಶುಚಿಗೊಳಿಸತಕ್ಕದ್ದು. ಆದರೆ ಪ್ರತಿಯೊಬ್ಬ ಬಳಕೆದಾರರು ತನ್ನದೇ ಸ್ವಂತ ಪಾರದರ್ಶಕ ಮುಖ ಕವಚ, ಮಾಸ್ಕ್ ಹಾಗೂ ಸೋಂಕು ನಿವಾರಕ ಗಳನ್ನು ತರುವುದನ್ನು ಉತ್ತೇಜಿಸತಕ್ಕದ್ದು.

* ಜಿಮ್-ಫಿಟೈಸ್ ಕೇಂದ್ರದಲ್ಲಿ ಸಾಕಷ್ಟು ಪ್ರಮಾಣದ ಸೋಂಕು ನಿವಾರಕ ಕಾಗದ (Disinfection Wipes), ಪೇಪರ್ ಟವಲ್‌ಗಳನ್ನು ಒದಗಿಸತಕ್ಕದ್ದು ಹಾಗೂ ಬಳಕೆದಾರರಿಗೆ ಇವುಗಳನ್ನು ಬಳಸಿ ತಾವು ಬಳಸುವ ಉಪಕರಣಗಳನ್ನು ಶುಚಿಗೊಳಿಸಿ ಕೊಳ್ಳಲು ಉತ್ತೇಜಿಸತಕ್ಕದ್ದು.

– ಜಿಮ್ ಬಳಕೆದಾರರು ಜಿಮ್ ಚಟುವಟಿಕೆ ಆರಂಭಿಸುವ ಮೊದಲು ಅವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ತಿಳಿಯಲು ಸರಳ ಪಲ್ಸ್ ಆಕ್ಸಿಮೀಟರ್ ಸೌಲಭ್ಯವನ್ನು ಒದಗಿಸಿ ತಕ್ಕದ್ದು.


Spread the love

Leave a Reply

Your email address will not be published. Required fields are marked *