ದೇವರೇ.. ನಾ ನಿನಗೆ ಋಣಿ… ಭಗವಂತನ ರೂಪದಲ್ಲಿ ಬಂದು “ಮೊರಬ”ದಲ್ಲಿ ಪ್ರಾಣ ಉಳಿಸಿದರು…!Exclusive video
ಧಾರವಾಡ: ಆತ ಮತ್ತೆಂದೂ ಜೀವಂತವಾಗಿ ಬದುಕಿ ಬರುತ್ತೇನೆಂದು ಕೊಂಡಿರಲೇ ಇಲ್ಲ. ಇವತ್ತು ನನ್ನ ಜೀವನದ ಅಂತ್ಯವಾಯಿತು ಎಂದುಕೊಂಡೇ ನೀರಲ್ಲಿ ಹರಿದು ಹೋಗುತ್ತಿದ್ದ. ಆದರೆ, ನಡೆದದ್ದೇ ಬೇರೆ. ಆತನ ಉಸಿರು ಗಟ್ಟಿಯಾಗಿತ್ತು…
ದೇವರು ದೊಡ್ಡವನು ಎಂದುಕೊಳ್ಳುವ ಹಾಗೇ ಆತ ಬದುಕುಳಿದು ಬಂದಿದ್ದಾನೆ. ಮೊರಬದ ಬಳಿ ಹಳ್ಳದಲ್ಲಿ ಸಿಲುಕಿ ಮೂನ್ನೂರು ಮೀಟರ್ ದೂರ ಸೆಳವಿನಲ್ಲಿ ಹೋಗಿ ಮುಳ್ಳಿನ ಕಂಟೆಯಲ್ಲೆ ಸಿಲುಕಿದ್ದ ಮಲ್ಲಪ್ಪ ವಟನಾಳ ಎಂಬಾತನಿಗೆ ಮೊರಬದ ಗ್ರಾಮಸ್ಥರೇ ದೇವರಾಗಿದ್ದಾರೆ.
ಊರೂರು ಅಲೆದು ಹೆಳುವತನ ಮಾಡುವ ಈತ ಬದುಕುಳಿದಿದ್ದೇ ಪವಾಡ. ಪ್ರವಾಹದಲ್ಲಿ ಸಿಲುಕಿದ್ದ ಮಲ್ಲಪ್ಪನ ಪ್ರಾಣ ಉಳಿದು ಹೊರಗೆ ಬಂದ ತಕ್ಷಣವೇ ಎಲ್ಲರಿಗೂ ಕೈ ಮುಗಿಯುತ್ತಿದ್ದ…
ಬದುಕಿದೇ ಬಡಜೀವ…