ಹೆಣ್ಣೆಂದು ಹೆತ್ತವರೇ ಕೊಂದು ಕಥೆ ಕಟ್ಟಿದ್ರು: ಪೊಲೀಸ್ರೀಗ ಅವರನ್ನೇ ಹೆಡಮುರಿಗೆ ಕಟ್ಟಿದ್ರು: ಜಾಣರೂರಲ್ಲಿ ಕೃತ್ಯ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಮನಕೊಪ್ಪದಲ್ಲಿ ನಡೆದ 40 ದಿನದ ಹೆಣ್ಣು ಮಗುವಿನ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರು ಪ್ರಕರಣ ಆರೋಪಿಗಳಾದ ಮಗುವಿನ ಹೆತ್ತವರನ್ನ ಇದೀಗ ಆರೆಸ್ಟ್ ಮಾಡಿದ್ದಾರೆ.
ಅಗಸ್ಟ್ 02 ರಂದು 40 ದಿನದ ಮಗುವಿನ ಶವ ರಾಮನಕೊಪ್ಪದ ಬಾವಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಆ ಬಾಲಕಿಯ ಪಾಲಕರು ತಮ್ಮ ಮಗು ತೊಟ್ಟಿಲಲ್ಲಿ ಮಲ್ಲಗಿರುವಾಗಲೇ ನಾಪತ್ತೆಯಾಗಿದೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇಲೆ ತನಿಖೆ ನಡೆಸಿದ ಯಲ್ಲಾಪುರ ಪೊಲೀಸರು ಪ್ರಕರಣ ತನಿಖೆ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳಾದ ಮಗುವಿನ ಪಾಲಕರಾದ ತಂದೆ ಚಂದ್ರಶೇಖರ್ ಭಟ್, ತಾಯಿ ಪ್ರೀಯಾಂಕಾ ಅವರನ್ನ ಬಂಧಿಸಿದ್ದಾರೆ.
ಮೃತ ತನುಶ್ರಿ ಮಗುವಿನ ಹತ್ತವರೆ ಹೆಣ್ಣು ಮಗು ಎನ್ನುವ ಕಾರಣಕ್ಕೆ ಬಾವಿಗೆ ಎಸೆದು ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.