ನವಲಗುಂದದಲ್ಲಿ ಆಸ್ತಿಗಾಗಿ ಕೈಕಟ್: ಆತ ಆಸ್ಪತ್ರೆ ಪಾಲು
ಧಾರವಾಡ: ನವಲಗುಂದ ಪಟ್ಟಣದಲ್ಲೇ ಸೋದರ ಅತ್ತೆಯ ಮಗನ ಮೇಲೆ ಸೋದರಮಾವನ ಮಗ ಹಲ್ಲೇ ಮಾಡಿರುವ ಘಟನೆ ನಡು ಮಧ್ಯಾಹ್ನವೇ ಸಂಭವಿಸಿದೆ.
ಪಟ್ಟಣದ ಹಳದಾರ ಓಣಿಯ ಬಸವರಾಜ ಸನಾದಿಯ ಮೇಲೆ ಫಕ್ಕೀರಪ್ಪ ಬೆಳವಾಡಿ ಕೊಡಲಿಯಿಂದ ಹಲ್ಲೇ ಮಾಡಿದ್ದು, ಒಂದು ಕೈ ಸಂಪೂರ್ಣ ಗಾಯಗೊಂಡಿದೆ. ತೀವ್ರ ರಕ್ತಸ್ರಾವ ಆಗುತ್ತಿದ್ದರಿಂದ ತಕ್ಷಣವೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರ ನಡುವೆ ಕೆಲವು ದಿನಗಳಿಂದ ಆಸ್ತಿ ವಿಚಾರವಾಗಿ ಜಗಳ ನಡೆಯುತ್ತಿತ್ತು. ಅದಿವತ್ತು ವಿಕೋಪಕ್ಕೆ ಹೋಗಿ ಇಂತಹ ಸ್ಥಿತಿ ನಿರ್ಮಾಣವಾಗಿದೆ.
ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.