ಬೈಕು ಕದ್ದು ಚಿನ್ನದಂಗಡಿಗೆ ಹೊಂಚು: ಕಿರಾತಕರಿಗೆ ಬೇಡಿ ತೊಡಿಸಿದ ಪೊಲೀಸರು
ದಕ್ಷಿಣಕನ್ನಡ: ಕೊರೋನಾ ಸಮಯದಲ್ಲೂ ಹಣಕ್ಕಾಗಿ ಅನ್ಯ ಮಾರ್ಗ ಹುಡುಕಿ ಬೈಕ್ ಕಳ್ಳತನಕ್ಕೆ ಇಳಿದಿದ್ದ ಐವರು, ಮತ್ತಷ್ಟು ಶ್ರೀಮಂತರಾಗಲು ಚಿನ್ನದಅಂಗಡಿಯನ್ನೇ ದೋಚಲು ಹೊಂಚು ಹಾಕಿದ್ದರು. ಆಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿರುವ ಘಟನೆ ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಐದು ಲಕ್ಷ ಮೌಲ್ಯದ ಏಳು ಬೈಕ್ ಗಳನ್ನ ಕದ್ದಿರುವವರನ್ನ ವಿಜಯ ಭೋವಿ, ಪ್ರದೀಪ ಪೂಜಾರಿ, ಅಭಿಜಿತ ಬಂಗೇರಾ, ರಕ್ಷಿತ ಕುಲಾಲ ಮತ್ತು ಸುದೀಶ ನಾಯರ್ ಎಂದು ಗುರುತಿಸಲಾಗಿದೆ.
ಈ ಐವರು ಕಳ್ಳರು ಕೂಡಿಕೊಂಡು ಮೂಡಬಿದ್ರೆ ಪೇಟೆಯ ಆಂಜನೇಯ ದೇವಸ್ಥಾನ ದರೋಡೆ ಮಾಡಲು ಸ್ಕೇಚ್ ರೂಪಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆದರಿಸಿ ಸಂಶಯದಿಂದ ಅಲೆದಾಡುತ್ತಿದ್ದ ವಿಜಯನನ್ನ ಬಂಧಿಸಿದಾಗ ಎಲ್ಲ ಪ್ರಕರಣಗಳು ಬಯಲಿಗೆ ಬಂದಿವೆ.
ಬಜಪೆ ಠಾಣೆ ಇನ್ಸ್ ಪೆಕ್ಟರ್ ಕೆ.ಆರ್.ನಾಯ್ಕ, ಪಿಎಸೈಗಳಾದ ಕಮಲಾ, ಎಂ.ಸತೀಶ, ರಾಘವೇಂದ್ರ ನಾಯಕ, ಎಸೈ ರಾಮ ಪೂಜಾರಿ, ರಾಮಚಂದ್ರ ಹೊನ್ನಪ್ಪಗೌಡ, ಸುಧೀರ ಶೆಟ್ಟಿ, ರಾಜೇಶ, ಸಂತೋಷ, ಡಿ.ಕೆ.ರೋಹಿತಕುಮಾರ ಸೇರಿದಂತೆ ಇನ್ನುಳಿದವರು ಆರೋಪಿಗಳ ಪತ್ತೆಗಾಗಿ ಶ್ರಮ ವಹಿಸಿದ್ದಾರೆ.