NWRTC ನೂತನ ಎಂಡಿಗೆ ವೇದಿಕೆಯಿಂದ ಸ್ವಾಗತ: ಹೊಸ ಹುರುಪು ಮೂಡಿಸಿದ ಭೇಟಿ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಕೃಷ್ಣ ಭಾಜಪೇಯಿ ಅವರನ್ನು ಕ.ರಾ.ರ.ಸಾರಿಗೆ ನಿಗಮಗಳ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ವತಿಯಿಂದ ಸ್ವಾಗತಿಸಲಾಯಿತು.
ವೇದಿಕೆಯ ರಾಜ್ಯಾದ್ಯಕ್ಷ ವಾಯ್ ಎಮ್ ಶಿವರಡ್ಡಿ, ಕಾರ್ಯದರ್ಶಿ ತಿಪ್ಪೇಶ ಅಣಜಿ, ರಫೀಕ್ ನಾಗನೂರ, ರಮೇಶ್ ಮೋರೆ, ಸಿದ್ದು ಹುಬ್ಬಳ್ಳಿ, ಬಸವರಾಜ ಯಕ್ಕಡಿ, ಈಶ್ವರಗೌಡ ಚನ್ನಪ್ಪಗೌಡ್ರ, ಗೋವಿಂದಗೌಡ ನೀಲಪ್ಪಗೌಡ್ರ, ಗಂಗಾಧರ ಪಾಚಾಪೂರ ಉಪಸ್ಥಿತರಿದ್ದರು.
ಸಾರಿಗೆ ಇಲಾಖೆಯ ಪ್ರತಿಯೊಬ್ಬರ ನೌಕರರ ಬಗ್ಗೆ ತಿಳಿದುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಸದಾಕಾಲ,ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿಕೊಂಡು ಬಂದಿರುವುದನ್ನ ಈ ಸಮಯದಲ್ಲಿ ಸ್ಮರಿಸಲಾಯಿತು.
ಎಂಡಿ ಕೃಷ್ಣ ಭಾಜಪೇಯಿ ಕೂಡಾ, ಎಲ್ಲ ಸಿಬ್ಬಂದಿಗಳ ಹಿತಾಸಕ್ತಿ ಕಾಪಾಡಿಕೊಂಡು ಹೋಗುವುದಾಗಿ ಭರವಸೆ ನೀಡಿದರು.