ವಿದ್ಯಾಗಮ ತಾತ್ಕಾಲಿಕ ಬ್ರೇಕ್: ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಒತ್ತಾಯ
ಧಾರವಾಡ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಾಪೂರ- ನೆರೆ ಹಾವಳಿ ಆಗುತ್ತಿರುವುದು ಸರಕಾರವೇ ರೆಡ್ ಅಲರ್ಟ್ ಘೋಷಣೆ ಮಾಡಿದೆ. ರೆಡ್ ಅಲರ್ಟ್ ಘೋಷಿಸಿದ ಜಿಲ್ಲೆಗಳಲ್ಲಿ ವಿದ್ಯಾಗಮ ಕಾರ್ಯ ಯೋಜನೆಯನ್ನ ತಾತ್ಕಾಲಿಕ ವಿನಾಯತಿ ನೀಡುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಸಜ್ಜನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಅಶೋಕ ಸಜ್ಜನ, ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಕೆರೆ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಂತಹ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳುವುದು ಶಿಕ್ಷಕರಿಗೆ ಅಪಾಯವಾಗತ್ತೆ. ವಿದ್ಯಾಗಮ ಕಾರ್ಯಾನುಷ್ಠಾನಕ್ಕೆ ಹೋದವರು ಮರಳಿ ಬರುವುದು ದುಸ್ತರವಾಗುವ ಸಾಧ್ಯತೆಯಿದೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಿದ ಜಿಲ್ಲೆಗಳಲ್ಲಿ ತಕ್ಷಣವೇ ವಿನಾಯತಿ ನೀಡಲು ಎಲ್ಲ ಜಿಲ್ಲೆಯ ಉಪನಿರ್ದೇಶಕರಿಗೆ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಳೆ ನಿಂತ ತಕ್ಷಣವೇ ವಿದ್ಯಾಗಮವನ್ನ ಮುಂದುವರೆಸಿಕೊಂಡು ಹೋಗುತ್ತೇವೆ ಎಂಬುದನ್ನ ಕೂಡಾ ಸಜ್ಜನ ಸ್ಪಷ್ಟಪಡಿಸಿದ್ದಾರೆ.