“ವಠಾರ ಶಾಲೆ ಪಾಠ ಮಾಡಿದ ಶಿಕ್ಷಕ” ಕೋವಿಡ್-ಗೆ ಬಲಿ: ಸಂತಾಪ ಸೂಚಿಸಿದ ಶಿಕ್ಷಕರ ಸಂಘ
ಕೊಪ್ಪಳ: ರಾಜ್ಯ ಸರಕಾರದ ಆದೇಶದಿಂದ ಶಿಕ್ಷಕರು ನಡೆದುಕೊಂಡರೇ ಅವರ ಜೀವನದಲ್ಲಿ ಏರುಪೇರುಗಳಾಗುತ್ತವೆ ಎಂಬುದಕ್ಕೆ ಸಾಕ್ಷಿಯಂಬಂತೆ ಶಿಕ್ಷಕರೋರ್ವರು ಕೊರೋನಾ ಪಾಸಿಟಿವ್ ನಿಂದ ಮೃತಪಟ್ಟಿದ್ದಾರೆ.
ನಾಲ್ಕು ದಿನದ ಹಿಂದೆ “ವಠಾರ ಶಾಲೆಯ ಪಾಠ” ಮಾಡಿದ ಗಂಗಾವತಿ ತಾಲೂಕು ಬಸವ ಪಟ್ಟಣ ತಾಂಡಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಮೋತಿಲಾಲ್ ರಾಠೋಡ್ ನಿನ್ನೆ ಸಂಜೆ 7.00 ಗಂಟೆಗೆ ಕೊರೋನಾ ಪಾಸಿಟಿವ್ ನಿಂದ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆಂದು ತಿಳಿದು ಬಂದಿರುತ್ತದೆ.
ಸಂತಾಪ: ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬದ ಸರ್ವ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯಘಟಕ ಹುಬ್ಬಳ್ಳಿಯಿಂದ ಪ್ರಾರ್ಥಿಸಿದ್ದಾರೆ.