Posts Slider

Karnataka Voice

Latest Kannada News

ಕೊರೋನಾ ಜಾಗೃತಿ ಅಭಿಯಾನ: ಈಶ್ವರಗೌಡ ಪಾಟೀಲ ಭಾಗಿ

Spread the love

ಹುಬ್ಬಳ್ಳಿ: ಸೇವಾ ಭಾರತಿ ಟ್ರಸ್ಟ್ ಹಾಗೂ ಹು- ಧಾ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಜರುಗಿದ ಕೊರೊನಾ 19 ಜನಜಾಗ್ರತಿ ಅಭಿಯಾನ ಹು- ಧಾ ಮಹಾನಗರ ಪಾಲಿಕೆಯ ವಲಯ ಕಛೇರಿ 06 ರ ವ್ಯಾಪ್ತಿಯಲ್ಲಿ ನಡೆಯಿತು.

ಬರುವ ವಾರ್ಡ ಬಿಜೆಪಿ ಪ್ರಮುಖರು ಹಾಗೂ ಸೇವಾ ಭಾರತಿ ಪ್ರಮುಖಕರು ಮತ್ತು ಅಧಿಕಾರಿಗಳು ಸೇರಿ ಬಾದಾಮಿ ನಗರದ ಬಾಲಭವನದಿಂದ ರಮೇಶ ಭವನ ಸರ್ಕಲ್, ಕೇಶ್ವಾಪೂರ ಸರ್ಕಲ್,  ಕುಸುಗಲ್ ರಸ್ತೆ ಮಾರ್ಗವಾಗಿ ಬಾದಾಮಿ ನಗರದ ಸುತಮುತ್ತಲಿನ ಕಾಲನಿಗಳಲ್ಲಿ ಪಾದಯಾತ್ರೆ ಜಾಥಾ ನಡೆಸಲಾಯಿತು.

ಕೊರೋನಾ19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ದಿಟ್ಟ ಕ್ರಮಗಳ  ಕುರಿತು ಜನಜಾಗ್ರತೆ ಮೂಡಿಸಲಾಯಿತು.  ಸೇವಾ ಭಾರತಿ ಪ್ರಮುಖ ಕಿರಣ, ವಿಶ್ವನಾಥ, ಬಿಜೆಪಿ ಪ್ರಮುಖ ಈಶ್ವರಗೌಡ ಬ ಪಾಟೀಲ, ವೀರೇಶ ಉಪ್ಪಿನ, ಬೀರಪ್ಪ ಖಂಡೇಕಾರ, ಪ್ರವೀಣ ಹುರಳಿ, ಮಾರುತಿ ಅವರಸಂಗ, ಮೇಘರಾಜ ಕೇರೂರ, ಈಶ್ವರ ಅರಳಿಕಟ್ಟಿ, ಬಸವರಾಜ ಹಳ್ಯಾಳ, ಯಲ್ಲಪ್ಪ ಈರನಟ್ಟಿ,  ಪಾಲಿಕೆ ಅಧಿಕಾರಿ ಹಾವೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *