ಎರಡು ವರ್ಷ “ಲವ್ ಯೂ” ಇವತ್ತು ಕುತ್ತಿಗೆಗೆ ಹಗ್ಗ: ಆತನಿಗೆ ಬೇಡಿ- ಇವಳಿಗೆ ಸಾವು
ತುಮಕೂರು: ಕಳೆದ ಎರಡು ವರ್ಷದಿಂದಲೂ ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದ ಜೋಡಿಯೊಂದು ರಾತ್ರಿ ವಿರಸದಿಂದ ಜಗಳವಾಡಿ ಹುಡುಗಿಯನ್ನ ನೇಣಿಗೆ ಹಾಕಿದ್ದಾನೆಂಬ ಆರೋಪದ ಘಟನೆ ಜಿಲ್ಲೆಯ ಕೊರಟಗೆರೆಯ ಕೋಟಿ ಬೀದಿಯಲ್ಲಿ ನಡೆದಿದೆ.
ಇಬ್ಬರನ್ನೂ ನೋಡಿದವರು ಇವರಿಬ್ಬರು ಮೇಡ್ ಪಾರ್ ಇಚ್ ಅದರ್ ಎನ್ನುವಂತೆ ಬದುಕುತ್ತಿದ್ದ ಉಮಾ ಇಂದು ಬೆಳಗಾಗುವುದರೊಳಗೆ ನೇಣಿಗೆ ಶರಣಾದ ರೀತಿಯಲ್ಲಿ ಪತ್ತೆಯಾಗಿದ್ದಾಳೆ. ಇದಕ್ಕೆ ಕಾರಣ ಅವಳ ಪ್ರಿಯಕರ ವೆಂಕಟೇಶ ಎಂದು ಹೇಳಲಾಗುತ್ತಿದೆ.
ನಿನ್ನೆ ತಡರಾತ್ರಿ ಜಗಳ ಮಾಡಿಕೊಂಡಾಗ ಉಮಾಳನ್ನ ಪ್ರಿಯಕರ ಮನಬಂದಂತೆ ಥಳಿಸಿದ್ದ. ಇಷ್ಟಅಲ್ಲದೇ ಆತನೇ ಅವಳಿಗೆ ನೇಣು ಹಾಕಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಕೊರಟಗೆರೆ ಠಾಣೆ ಪೊಲೀಸರು ಆಪಾದಿತ ವೆಂಕಟೇಶನನ್ನ ಬಂಧನ ಮಾಡಿ, ವಿಚಾರಣೆ ಮಾಡುತ್ತಿದ್ದಾರೆ.