ಬಿಯರ್ ಕುಡಿಯಲು ಹೋದ ಕೆರಿ ಹಾವು..! ಏನಾಯ್ತು ಗೊತ್ತಾ.. ಇಲ್ಲಿದೆ ಎಕ್ಸಕ್ಲೂಸಿವ್ ವೀಡಿಯೋ..
ಮೈಸೂರು: ಕುಡಿದು ಬಿಸಾಡಿದ್ದ ಬಿಯರ್ ಟಿನ್ ದೊಳಗೆ ಕೆರಿ ಹಾವೊಂದು ಸಿಲುಕಿ ನಸೆ ಬಂದಂತೆ ಹೊರಳಾಡಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಬಳಿ ಸಂಭವಿಸಿದೆ. ಕುಡಿದು ಬಿಸಾಡಿದ್ದ ಬಿಯರ್ ಟಿನ್ ದೊಳಗೆ ನುಸುಳಲು ಹೋಗಿದ್ದ ಕೆರಿ ಹಾವು, ಒಳಗೆ ಹೋದ ನಂತರ ಹೊರಗೆ ಬಾರದೇ ಮುಖವನ್ನಅದರಲ್ಲೇ ಸಿಲುಕಿಸಿಕೊಂಡು ನಸೆಯಾದವರಂತೆ ಹೊರಳಾಡುತ್ತಿತ್ತು. ಹೊರಬರಲಾರದೆ ಒದ್ದಾಡುತ್ತಿದ್ದ ಹಾವನ್ನು ಕಂಡ ಸ್ನೇಕ್ ಗಿರೀಶ್, ಶತಪ್ರಯತ್ನ ಮಾಡುವುದರ ಮೂಲಕ ಹೊರ ತೆಗೆದರು.
ಎಂಟು ಅಡಿ ಉದ್ದದ ಕೆರಿ ಹಾವು ಸಿಕ್ಕಿಕೊಂಡಿದ್ದ ಟಿನ್ ನ್ನ ಕಟರ್ ನಿಂದ ಕತ್ತರಿಸಿ ಸ್ನೇಹಿತರ ಜೊತೆಗೂಡಿ ಹಾವನ್ನ ರಕ್ಷಣೆ ಮಾಡಿದ ಗಿರೀಶ್, ಗೆಳೆಯರೊಂದಿಗೆ ಹಾವನ್ನ ಕಾಡಿಗೆ ಬಿಟ್ಟು ಬಂದರು.