ಪರೀಕ್ಷೆಯ ಫಲಿತಾಂಶಕ್ಕೆ ಬೆದರಿ ನೇಣಿಗೆ ಕೊರಳೋಡ್ಡಿದ ವಿದ್ಯಾರ್ಥಿನಿ
ಹಾವೇರಿ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಂದ ಒಂದೇ ಗಂಟೆಯಲ್ಲಿ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಘಟನೆ ನಗರದ ದ್ಯಾಮವನ್ನ ಓಣಿಯಲ್ಲಿ ನಡೆದಿದೆ.
ಪರೀಕ್ಷೆ ಬರೆದಾಗಿನಿಂದ ೊಂದು ವಿಷಯದ ಬಗ್ಗೆ ಬೇಸರಗೊಂಡಿದ್ದ ವಿದ್ಯಾರ್ಥಿನಿ ವೈಷ್ಣವಿ ರಿತ್ತಿಗೆ ಮನೆಯವರೆಲ್ಲರೂ ತಿಳುವಳಿಕೆ ನೀಡಿದ್ದರು. ಫಲಿತಾಂಶ ಏನೇ ಬಂದರೂ ತೊಂದರೆಯಿಲ್ಲ ಎಂಬ ಧೈರ್ಯವನ್ನ ತುಂಬಿದ್ದರು. ಆದರೆ, ಫಲಿತಾಂಶ ನೋಡಿದ ಕೆಲವೇ ಗಂಟೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಗಣಿತ ವಿಷಯದಲ್ಲಿ ಅನುತ್ತೀರ್ಣಳಾಗಿದ್ದರಿಂದ ಮನನೊಂದು ಹೀಗೆ ಮಾಡಿಕೊಂಡಿದ್ದು ಶವವನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪೊಲೀಸರು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.
                      
                      
                      
                      
                      