ನಾಳೆಯಿಂದಲೇ ಪೂರಕಪರೀಕ್ಷೆ ಅರ್ಜಿ ಸಲ್ಲಿಕೆ: ಸೆಪ್ಟಂಬರ್ ನಲ್ಲಿ ಪರೀಕ್ಷೆ
ಬೆಂಗಳೂರು: ಹತ್ತನೇ ವರ್ಗದ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯ ಸರಕಾರ ಪೂರಕ ಪರೀಕ್ಷೆ ನಡೆಸಲು ಮುಂದಾಗಿದ್ದು, ಸೆಪ್ಟಂಬರ್ ನಲ್ಲೇ ಪೂರಕ ಪರೀಕ್ಷೆ ನಡೆಯಲಿದೆ.
ಹತ್ತನೇ ವರ್ಗದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ನಾಳೆಯಿಂದಲೇ ಪೂರಕ ಪರೀಕ್ಷೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಆದೇಶವನ್ನ ಹೊರಡಿಸಿದ್ದು, ಆನ್ ಲೈನ್ ದಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನ ಮಾಡಿದ್ದಾರೆ.
ಒಂದು ವಿಷಯಕ್ಕೆ 320 ರೂಪಾಯಿ, ಎರಡು ವಿಷಯಕ್ಕೆ 386 ರೂಪಾಯಿ, ಮೂರು ಅಥವಾ ಅದಕ್ಕಿಂತ ಮೇಲ್ಪಟ್ಟು ಇದ್ದರೇ 520 ರೂಪಾಯಿ ನಿಗದಿ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗಿದ್ದು, ಅನುತೀರ್ಣರಾದ ವಿದ್ಐಆರ್ಥಿಗಳು ಮಾತ್ರ ಶುಲ್ಕವನ್ನ ತುಂಬಬೇಕಾಗಿದೆ.
ದಂಡ ರಹಿತವಾಗಿ ಆಗಸ್ಟ್ 20ರ ವರೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದ್ದು, ದಂಡ ಸಹಿತ ಸೆಪ್ಟಂಬರ್ 02 ರವರೆಗೆ ಅರ್ಜಿಯನ್ನ ಹಾಕಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಶಾಲೆಗಳಲ್ಲಿ ಸಂಪರ್ಕಿಸುವುದು ಒಳಿತು.