Posts Slider

Karnataka Voice

Latest Kannada News

ಮರೆಯಾದ ಹುಬ್ಬಳ್ಳಿಯ ಬಡವರ ದೇವರು: ಕೈ ಮುಗಿತೇವಿ ಮತ್ತೆ ಹುಟ್ಟಿ ಬನ್ನಿ..!

1 min read
Spread the love

ಹುಬ್ಬಳ್ಳಿ: ಇವರು ಹುಬ್ಬಳ್ಳಿಯಲ್ಲೇ ಇದ್ದರೂ ಎಂಬುದು ಬಹುತೇಕರಿಗೆ ಗೊತ್ತಾಯಿರಲಿಲ್ಲ. ಆದರೆ, ಪ್ರತಿ ಬಡವನಿಗೂ ಇವರ ಬಗ್ಗೆ ಬಹಳ ಗೊತ್ತಿತ್ತು. ವೈಧ್ಯಕೀಯ ಲೋಕದಲ್ಲಂತೂ ಇವರ ಹೆಸರು ಮುಂಚೂಣಿಯಲ್ಲಿತ್ತು. ಅಂಥವರೇ ಎಲ್ಲರನ್ನೂ ಬಿಟ್ಟು ಮರಳಿ ಬಾರದೂರಿಗೆ ಹೊರಟು ಹೋಗಿದ್ದಾರೆ. ಅವರೇ ಡಾ.ಮಕ್ಸೂದ್ ಜಾಗೀರದಾರ..!

ಹೌದು.. ಕೊರೋನಾ ವೈರಸ್ ಹರಡುತ್ತಿದ್ದಾಗ ಇವರು ಬೀದಿ ಬೀದಿ ಅಲೆದು ಜನರಲ್ಲಿ ತಿಳುವಳಿಕೆ ನೀಡುತ್ತಿದ್ದರು. ಪೊಲೀಸ್ ವಾಹನಗಳ ಮೈಕ್ ಬಳಕೆ ಮಾಡಿಕೊಂಡು, ಮಸೀದಿಗೆ ಹೋಗಿ ಜನರಿಗೆ ಅವರದ್ದೇ ಭಾಷೆಯಲ್ಲಿ ಅರ್ಥ ಮಾಡಿಸುತ್ತಿದ್ದರು.

ಕೋವಿಡ್-19 ಪ್ರಂಟ್ ಲೈನ್ ವಾರಿಯರ್ ಆಗಿದ್ದ ಇವರು ಕಷ್ಟ ಸಮಯದಲ್ಲಿ ನೀಡಿದ ಸೇವೆ ಅಮೋಘ. ಯಾವುದೇ ಥರದ ವ್ಯಕ್ತಿಯನ್ನೂ ಪ್ರೀತಿಯಿಂದ ಸಂತೈಸುವ ಮನಸ್ಸು ಅವರಲ್ಲಿತ್ತು. ಬದುಕಿನ ಎಲ್ಲ ದಿನಗಳನ್ನೂ ಅವರು ಜನರ ಸೇವೆಗಾಗಿಯೇ ಮುಡಿಪಿಟ್ಟರು.

ಕೊರೋನಾ ಸೋಂಕಿತರು ಸಾವನ್ನಪ್ಪಿದಾಗ ಶವ ಸಂಸ್ಕಾರದ ಸಮಿತಿಯಲ್ಲಿದ್ದ ಡಾ.ಮಕ್ಸೂದ್ ಜಾಗೀರದಾರ, ಯಾರೇ ತೀರಿಕೊಂಡರು ಅಂತಿಮ ಯಾತ್ರೆ ಮಾತ್ರ ಏನೂ ತೊಂದರೆಯಾಗದ ಹಾಗೇ ನೋಡಿಕೊಳ್ಳುತ್ತಿದ್ದರು.

ಇಂಥಹ ಮಹಾನ್ ವ್ಯಕ್ತಿ ಬ್ರೈನ್ ಸ್ಟ್ರೋಕ್ ನಿಂದ ತೀರಿ ಹೋಗಿದ್ದಾರೆ. ಜಿಲ್ಲಾಡಳಿತ ಇಂತಹ ಮಹಾನ್ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸವನ್ನ ಮಾಡಬೇಕಿದೆ. ಜೊತೆಗೆ ಡಾ.ಮಕ್ಸೂದ್ ಜಾಗೀರದಾರಂತವರನ್ನ ಸ್ಮರಿಸಬೇಕಿದೆ. ಆಗಲೇ ಜಿಲ್ಲಾಡಳಿತ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿದಂತಾಗುತ್ತದೆ.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಬುದ್ಧರಿರುವದರಿಂದ  ಡಾ.ಮಕ್ಸೂದ್ ಜಾಗೀರದಾರ ಸೇವೆಗೆ ಮತ್ತು ಅವರ ಕುಟುಂಬಕ್ಕೆ ಗೌರವ ನೀಡುತ್ತಾರೆಂದು ಬಯಸುತ್ತ.. ಡಾ.ಮಕ್ಸೂದ್ ಜಾಗೀರದಾರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಯಸೋಣ..


Spread the love

Leave a Reply

Your email address will not be published. Required fields are marked *