ಅತ್ಯಾಚಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಮೂರು ತಿಂಗಳಾದರೂ ಜಾರ್ಜ್ ಶೀಟ್ ಹಾಕದ ಪೊಲೀಸರು: ಇವರನ್ನ ತನಿಖೆಯಿಂದಲೇ ಹೊರಗಿಡಿ
ಧಾರವಾಡ: ತಾಲೂಕಿನ ಮಾಧನಭಾವಿ ಗ್ರಾಮದಲ್ಲಿ ಲೈಂಗಿಕ ಧೌರ್ಜನ್ಯಕ್ಕೊಳಗಾಗಿ ಕೊಲೆಗೀಡಾದ ಬಾಲಕಿ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಮಯದಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಧಾರವಾಡ ತಾಲೂಕಿನ ಬೋಗೂರು ಹಾಗೂ ಮಾಧನಭಾವಿಯ ಎರಡೂ ಘಟನೆಗಳನ್ನು ಸರ್ಕಾರ ಹೈಕೋರ್ಟ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸರಕಾರ ಜವಾಬ್ದಾರಿಯುತವಾಗಿ ನಿಭಾಯಿಸಬೇಕು, ಪೊಲೀಸ್ ಇಲಾಖೆಯಿಂದ ತನಿಖೆ ನಡೆಯುವುದು ಬೇಡ. ಕಾರಣ ರಾಜಕಾರಣಿಗಳ ಹಿತಾಸಕ್ತಿ ಕಾಪಾಡುವ ಸಾಧ್ಯೆತಯಿದೆ. ಪೊಲೀಸರು ಇದರಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು. ಮೂರು ತಿಂಗಳಾದರೂ ತನಿಖೆಯಾಗಿಲ್ಲಾ ಚಾರ್ಜಶೀಟ್ ಆಗಿಲ್ಲಾ ಅಂದರ ರಾಜ್ಯ ಸರಕಾರದ ಪೊಲೀಸ ಇಲಾಖೆಯ ಅಕ್ಷಮ್ಯ ಅಪರಾಧವಾಗಿದೆ ಎಂದರು. ಮತ್ತೊಂದು ಸಲ ಈ ರೀತಿಯ ಘಟನೆ ಆಗದಂತೆ ಗೃಹ ಇಲಾಖೆ ಎಚ್ಚೆತ್ತು ಕ್ರಮ ವಹಿಸಬೇಕು ಎಂದರು.
ಕಾಂಗ್ರೆಸ್ ನ ಪ್ರಮುಖರು ಉಪಸ್ಥಿತರಿದ್ದರು.