ಹುಬ್ಬಳ್ಳಿ ಬಳಿ ಭೀಕರ ರಸ್ತೆ ಅಪಘಾತ: 1ಸಾವು- ನಾಲ್ವರ ಸ್ಥಿತಿ ಚಿಂತಾಜನಕ: ಜನರಿದಂದಲೇ ಉಳಿದವರ ಎಕ್ಸಕ್ಲೂಸಿವ್ ವಿಡೀಯೋ
ಹುಬ್ಬಳ್ಳಿ: ರಭಸವಾಗಿ ಹೊರಟಿದ್ದ ಕಾರು ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸ್ಥಳೀಯರಿಂದ ನಾಲ್ವರು ಬಚಾವಾದ ಘಟನೆ ಅದರಗುಂಚಿ ಬಳಿ ನಡೆದಿದೆ.
ಸೇಲಂನಿಂದ ಮುಂಬೈಗೆ ಹೊರಟಿದ್ದ ಕಾರು ಅದರಗುಂಚಿ ಬಳಿ ಅಪಘಾತವಾಗಿದ್ದು, ಸ್ಥಳದಲ್ಲಿಯೇ ಅಯ್ಯನಾರ ಎಂಬ ವ್ಯಕ್ತಿ ಸಾವಿಗೀಡಾಗಿದ್ದಾನೆ. ಇನ್ನುಳಿದಂತೆ ಕಾರಿನಲ್ಲೇ ಸಿಕ್ಕಿಕೊಂಡಿದ್ದ ನಾಲ್ವರನ್ನ ಸ್ಥಳೀಯರು ಮುಂದೆ ಬಂದು ಬದುಕಿಸಿದ್ದಾರೆ.
ಅಪಘಾತದ ರಭಸಕ್ಕೆ ಒಳಗಿದ್ದ ಮಹಿಳೆಯರು ಬದುಕಿಸಿ ಬದುಕಿಸಿ ಎಂದು ಗೋಳಿಡುತ್ತಿದ್ದರು. ಅಲ್ಲಿಯೇ ಇದ್ದ ಯುವಕರ ಗುಂಪೊಂಡು ಕಾರಿನ ಬಾಗಿಲನ್ನ ಜಗ್ಗಿ ಮಹಿಳೆಯರನ್ನ ಹೊರಗೆ ತೆಗೆದಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವವರನ್ನ ಕಿಮ್ಸ್ ಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ತೆರಳಿದ್ದಾರೆ.
ಲಾರಿ ಮತ್ತು ಕಾರು ಡಿಕ್ಕಿ, ಓರ್ವ ಸ್ಥಳದಲ್ಲಿಯೆ ಸಾವು, ನಾಲ್ಕು ಜನರ ಸ್ಥಿತಿ ಚಿಂತಾಜನಕ. ತಮಿಳುನಾಡು ಮೂಲದ ಕಾರು ಇದ್ದಾಗಿದ್ದು, ಯಾವ ಕಾರಣಕ್ಕೆ ಮುಂಬೈಗೆ ಹೊರಟಿದ್ದರು ಎಂಬುದು ತಿಳಿಯಬೇಕಾಗಿದೆ.