ಕೊನೆ ಬಸ್ಸು ಹಿಡಿದ ಅನಿಲ ಬಾಸೂರ: “ಪೆನ್ನಿ”ಡಿದ ಕೈಯಲ್ಲೀಗ ಜೋಡೆತ್ತು..!- ಪೋಟೋಗಳಿವೆ..
ಹಾನಗಲ್: ಆತ ಊರಲ್ಲಿದ್ದರೇ ಸಾಕು.. ಹೊಲದಲ್ಲಿನ ಆಳು-ಕಾಳನ್ನ ನೋಡಿಕೊಂಡು ಹೋದ್ರೇ ಸಾಕು.. ಬೀಗರನ್ನ ಆಗಾಗ ಭೇಟಿಯಾಗಿ ಮಾತಾಡಿದ್ರೇ ಸಾಕು.. ಕೊನೆ ಕೊನೆಗೆ ಒಂದಿಷ್ಟು ಹೊತ್ತು ನಂಜೊತೆ ಕಳೆದ್ರು ಸಾಕು.. ಅಂದುಕೊಳ್ಳುತ್ತಿದ್ದವರನ್ನೇ ಮರೆತಂತೆ ಕೆಲಸದಲ್ಲೇ ಜನಾರ್ಧನ ಕಾಣುತ್ತಿದ್ದವರ ಇವತ್ತಿನ ಜೀವನ ಹೇಗೇಲ್ಲ ಬದಲಾಗಿದೆ ಅನ್ನೋದನ್ನ ತೋರಿಸೋ ಪ್ರಯತ್ನದ ವರದಿಯಿದು.
ಹೀಗೆ ಕೈಯಲ್ಲಿ ಬತ್ತದ ಮೆದೆಯನ್ನ ಹಿಡಿದುಕೊಂಡು ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾತ ಸದಾಶಿವ ಬಾಸೂರ @ ಅನಿಲ ಬಾಸೂರ @ ಉದಾಶಿ @ ಮುದುಕ.. ಇತ್ಯಾದಿ.. ಇತ್ಯಾದಿ..
ಸರಕಾರಿ ಶಾಲೆಯ ಶಿಕ್ಷಕರ ಮಗ. ಹಾನಗಲ್ ತಾಲೂಕಿನ ಮಹಾರಾಜಪೇಟೆಯಾತ. ಹಲವು ಎಕರೆ ಮಾವಿನ ತೋಟ, ಅಡಿಕೆ ತೋಟವಿದ್ದರೂ ಕಲಿತದ್ದಕ್ಕಾಗಿ ಪತ್ರಕರ್ತನಾದ. ಹುಬ್ಬಳ್ಳಿ, ಹಾವೇರಿ, ಬಾಗಲಕೋಟೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಲೇ ಬೆಂಗಳೂರಿಗೆ ಹೋಗಿಬಿಟ್ಟ. ಕೆಲಸದ ಜೊತೆಗೆ ಸಂಬಂಧಗಳೂ ದೂರವಾಗಿಬಿಟ್ಟವು. ಒಂದು ರೀತಿ ಬೆಂಗಳೂರಿಗೆ ಹೋದ ಮೇಲೆ ಎಲ್ಲವೂ ದೂರ ದೂರವಾಗತ್ತೆ ಬಿಡಿ.
ಆದರೆ, ಅನಿಲ ಬಾಸೂರ ರಾಜಧಾನಿಯಲ್ಲೇ ಇದ್ದು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದ. ತಂದೆ ಇಲ್ಲವಾದ ನಂತರ ಮತ್ತಷ್ಟು ಕುಗ್ಗಿ ಹೋದನಾದರೂ, ಕುಟುಂಬಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು ಬಂದಾ. ಆದರೆ, ಊರಿಗೆ ಬರೋದು ಮಾತ್ರ ಬೀಗನಂತಾದ.. ಪರಿಸ್ಥಿತಿ ಬದಲಾಗಿದೆ.. ಆತ ಊರಿಗೆ ಬಂದು ತಿಂಗಳುಗಳೇ ಕಳೆದಿವೆ..
ಈ ಕೊರೋನಾ ಎಂಬ ವೈರಸ್ ಎಷ್ಟು ಜನರಿಗೆ ತೊಂದರೆ ಕೊಟ್ಟಿದೇಯೋ ಅಷ್ಟೇ ಜನರನ್ನ ಒಂದುಗೂಡಿಸಿದೆ. ಅನಿಲ ಬಾಸೂರ ಕೂಡಾ ಅವತ್ತು ಬಯಸುತ್ತಿದ್ದನ್ನ ಮಾಡತೊಡಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡ್ತಿದ್ದಾನೆ. ಬತ್ತದ ನಾಟಿ ಮಾಡುತ್ತಿದ್ದಾನೆ.. ಬೆಂಗಳೂರಿನ ಕೆಲಸವನ್ನ “ವರ್ಕ್ ಪ್ರಾಂ ಹೋಮ್” ಮುಗಿಸಿ ತನ್ನ ಜೀವನದ ಖುಷಿಯ ದಿನಗಳನ್ನ ಕಳೆಯುತ್ತಿದ್ದಾನೆ.
ಬೆಂಗಳೂರಿನಲ್ಲಿಂದು ಬದುಕು ಕಟ್ಟಿಕೊಂಡರೂ ನೆಮ್ಮದಿ ಕಾಣದ ಇಂತಹ ನೂರಾರೂ ಜೀವಗಳು ಗ್ರಾಮೀಣ ಬದುಕಿಗೆ ಮತ್ತೆ ಮೈಯೊಡ್ಡಿವೆ. ಥ್ಯಾಂಕೂ ವೆರಿ ಮಚ್ ಕೊರೋನಾ…!



