Posts Slider

Karnataka Voice

Latest Kannada News

BIG Exclusive ಗರಗದಲ್ಲಿ ಚಿತ್ರನಟಿ ಅಮೂಲ್ಯ ಪತಿ: ಆತ್ಮನಿರ್ಭರಕ್ಕೆ ಮುಂದಾದ ಜಗದೀಶ- ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಣೆ

Spread the love

ಧಾರವಾಡ: ಚಿತ್ರನಟಿ ಅಮೂಲ್ಯ ಪತಿ ಜಗದೀಶ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನ ವಿಭಿನ್ನವಾಗಿ ಆಚರಿಸಲು ಬೆಂಗಳೂರಿನಿಂದ ಗರಗ ಗ್ರಾಮಕ್ಕೆ ಆಗಮಿಸಿ, ಖಾದಿಯನ್ನ ಬಳಸಿಕೊಳ್ಳುವ ಮೂಲಕ ಆತ್ಮನಿರ್ಭರಕ್ಕೆ ಮುಂದಾಗಬೇಕೆಂಬ ಕಲ್ಪನೆಯನ್ನ ಸಾದರಪಡಿಸಿದರು.
ಗರಗ ಕುಂಬಾರ ಓಣಿಯಲ್ಲಿರುವ ರಾಷ್ಟ್ರಧ್ವಜ ನಿರ್ಮಾಣಕ್ಕೆ ಸಿದ್ಧಪಡಿಸುವ ಖಾದಿ ಬಟ್ಟೆಯನ್ನು ನಿರ್ಮಾಣ ಮಾಡಲಾಗತ್ತೆ. ಕೊರೋನಾ ಸಮಯದಲ್ಲಿ ಇಲ್ಲಿನವರೊಂದಿಗೆ ಸಮಯ ಕಳೆಯುವ ಆಲೋಚನೆಯೊಂದಿಗೆ ಜಗದೀಶ ಕೇಂದ್ರಕ್ಕೆ ಆಗಮಿಸಿದ್ದಾರೆ.

ನೂಲು ಸಿದ್ಧಪಡಿಸುವುದು ಹೇಗೆ.. ಮಾರಾಟದ ವ್ಯವಸ್ಥೆ ಹೇಗಿರತ್ತೆ.. ಕೊರೋನಾ ಸಮಯದಲ್ಲಿ ಆಗಿರುವ ತೊಂದರೆಯೇನು ಎಂಬುದರ ಬಗ್ಗೆ ಸಮಗ್ರವಾದ ಮಾಹಿತಿಯನ್ನ ಎನ್.ಎಂ.ತಿರ್ಲಾಪುರರಿಂದ ಪಡೆದರು.
ನೂಲು ಸಿದ್ಧವಾಗುವ ಸ್ಥಳಗಳಿಗೆ ಹೋಗಿ ಬಡತನದಲ್ಲೂ ದೇಶ ಸೇವೆ ಮಾಡುತ್ತಿರುವ ಮಹಿಳೆಯರಿಗೆ ಗೌರವ ಸಲ್ಲಿಸಿದರು. ಅಲ್ಲಿದ್ದ ಮಹಿಳೆಯರ ಮಕ್ಕಳಿಗೆ ಅನುಕೂಲವಾಗಲಿ ಎಂದು ಸ್ಕೂಲ್ ಬ್ಯಾಗ್, ಪುಸ್ತಕಗಳನ್ನ ನೀಡಿದರು.
ಬೆಂಗಳೂರಿನ ಜಿಎಚ್‌ಆರ್ ತಂಡದ ನೇತೃತ್ವವನ್ನ ಜಗದೀಶ ಅವರೇ ವಹಿಸಿಕೊಂಡಿದ್ದರು. ತಂಡದಲ್ಲಿ ರಾಘವೇಂದ್ರ, ಅವಿನಾಶ, ಕೆ.ನಾಗರಾಜ, ಮನೋಜ, ಕಾರ್ತಿಕ, ಜೀವನ, ಅಭಿ, ದಿಲೀಪಕುಮಾರ, ದೃವಕುಮಾರ ಆಗಮಿಸಿದ್ದರು.
ಗರಗದ ಕೇಂದ್ರದ ಮ್ಯಾನೇಜರ್ ಈಶ್ವರ ಇಟಗಿ, ನೂಲು ಕೇಂದ್ರದ ಮ್ಯಾನೇಜರ್ ರಾಜು ಕಳಸದ, ಸೇಲ್ಸ್ ಮ್ಯಾನೇಜರ ಬಸವರಾಜ ಕುಮಾರಸ್ವಾಮಿಮಠ, ನಾಗನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *