ಬಿಪಿಎಡ್ ಆದವರಿಗೆ ಸಧ್ಯದಲ್ಲೇ ಪ್ರಮೋಷನ್: ಡಿಡಿಪಿಐ ಮೋಹನಕುಮಾರ ಹಂಚಾಟೆ
ಧಾರವಾಡ: ಪ್ರಾಥಮಿಕ ಶಾಲೆಯಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಗಸ್ಟ್ 15ರಂದೇ ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಖುಷಿಯ ವಿಚಾರವನ್ನ ಹೊರಗೆ ಹಾಕಿದ್ದು, ಸಧ್ಯದಲ್ಲೇ ಅನೇಕರಿಗೆ ಪದೋನ್ನತಿ ಸಿಗಲಿದೆ.
ಬಿಪಿಎಡ್ ತರಬೇತಿ ಮುಗಿದರೂ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹಲವು ಶಿಕ್ಷಕರಿಗೆ ಗ್ರೇಡ್ ಒನ್ ಪದೋನ್ನತಿಯನ್ನ ಸಧ್ಯದಲ್ಲೇ ನೀಡಲಾಗುವುದು ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಬೇರೆ ವಿಷಯದ ಶಿಕ್ಷಕರಿಗೆ ಪದೋನ್ನತಿ ನೀಡಿದ್ದು, ಅದೇ ರೀತಿ ದೈಹಿಕ ಶಿಕ್ಷಣ ಶಿಕ್ಷಕರ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ. ಸಾಧ್ಯವಾದಷ್ಟು ಬೇಗನೇ ಅವರಿಗೂ ಪದೋನ್ನತಿ ನೀಡಲಾಗುವುದು ಎಂದರು.
ದೈಹಿಕ ಶಿಕ್ಷಣ ಶಿಕ್ಷಕರು ಸಿಪಿಎಡ್ ಮಾಡಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ನೀಡುತ್ತ ಬಂದಿದ್ದು, ಕೆಲವರು ಬಿಪಿಎಡ್ ಮಾಡಿಯೂ ಯಾವುದೇ ಪ್ರಮೋಷನ್ ಇಲ್ಲದೇ ಪ್ರಾಥಮಿಕ ಶಾಲೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರ ಸಂಘಗಳು ಹಲವು ಬಾರಿ ಮನವಿಯನ್ನೂ ಮಾಡಿಕೊಂಡಿದ್ದವು.
ಡಿಡಿಪಿಐ ಮೋಹನಕುಮಾರ ಹಂಚಾಟೆ, ದೈಹಿಕ ಶಿಕ್ಷಣ ಶಿಕ್ಷಕರ ನೋವಿಗೆ ಸ್ಪಂಧಿಸಲು ಮನಸ್ಸು ಮಾಡಿದ್ದು, ಆದಷ್ಟು ಬೇಗ ತಮಗೂ ಪದೋನ್ನತಿ ಸಿಗಲಿದೆ ಎಂದು ಹಲವರು ಅಂದುಕೊಂಡಿದ್ದಾರೆ.