ಕೈಯಲ್ಲಿ ಬಂದೂಕು- ಬಾಯಲ್ಲಿ ಕೆಮ್ಮು: ಮುಂದೆ ಬಂದ್ರೇ ಗುಂಡು-ಹತ್ತಿರ ಬಂದ್ರೇ ಕೊರೋನಾ: ದರೋಡೆಗಿಳಿದವನ ಹೊಸ ವರಸೆ..!
ಕಲಬುರಗಿ: ಆತನ ಕೈಯಲ್ಲಿ ಬಂದೂಕು. ಬಂದವನೇ ಆವಾಜ್ ಹಾಕಿದ್ದು ಐಸಿಐಸಿಐ ಬ್ಯಾಂಕ್ ಸಿಬ್ಬಂದಿಗೆ. ಏನೂ ಅರಿಯದೇ ಕೂತಿದ್ದಅವರೆಲ್ಲರೂ ಆತಂಕಕ್ಕೀಡಾಗಿ ಅಲ್ಲಿಂದ ಜಾಗ ಖಾಲಿ ಮಾಡೋ ಪ್ರಯತ್ನದಲ್ಲಿದ್ದರು. ಆದರೆ, ದರೋಡೆಗೆ ಅಂತ ಬಂದವನು ಕೇಳಿದ್ದು ಎರಡು ನೂರು ರೂಪಾಯಿ ಮಾತ್ರ.. ಹೌದು ಕಣ್ರೀ.. ಇನ್ನೂ ತಿಳಿಬೇಕಾ ಇದನ್ನ ಪೂರ್ತಿ ಓದಿ.
ಹೀಗೆ ಬ್ಯಾಂಕಿನ ಹೊರಗಡೆ ಹೋಗುವಾಗ ಪೊಲೀಸರ ಲಾಠಿಯಿಂದ ಬಾರಿಸಿಕೊಳ್ಳುತ್ತಿರುವ ವ್ಯಕ್ತಿಯ ಹೆಸರೇ ಸುಲ್ತಾನ. ಕುಡಿದ ಮತ್ತಿನಲ್ಲಿ ಆಟಿಕೆಯ ಬಂದೂಕು ಇಟ್ಟುಕೊಂಡಡು ಕಲಬುರಗಿ ನಗರದ ಗಂಜ್ ನಲ್ಲಿರೋ ಐಸಿಐಸಿಐ ಬ್ಯಾಂಕಿಗೆ ನುಗ್ಗಿದ್ದ.
ಕಳೆದ ಗುರುವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಭಯ ಹುಟ್ಟಿಸಿದ ಸುಲ್ತಾನ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನ ನೀಡಿ ಎಳೆದುಕೊಂಡು ಹೋಗುವಂತೆ ಮಾಡಿದ್ದಾರೆ. ಸುಲ್ತಾನ್ ಎಷ್ಟು ಚಾಲಾಕಿ ಎಂದರೇ, ಆತನ ಹತ್ತಿರ ಯಾರೂದರೂ ಹೋದರೇ ಜೋರಾಗಿ ಕೆಮ್ಮುತ್ತಿದ್ದನಂತೆ. ಕೊರೋನಾ ಬರತ್ತೆ ಎಂದುಕೊಂಡು ಪಕ್ಕದಲ್ಲಿದ್ದವರು ದೂರ ಸರಿಯುತ್ತಿದ್ದರಂತೆ.
ಕುಡಿತದ ಚಟಕ್ಕೆ ಬಿದ್ದವರಿಗೆ ಮಾತ್ರ ಇಂತಹ ಐಡಿಯಾಗಳು ಬರಬಹುದೇನೋ. ಪೊಲೀಸರೂ ಇದಕ್ಕೇಲ್ಲ ಮದ್ದು ನೀಡಿದ್ದು ಮಿಜಗುರಿ ಬಡಾವಣೆಯ ಸುಲ್ತಾನ ಕಂಬಿ ಹಿಂದೆ ಹೋಗಿದ್ದಾನೆ.