Posts Slider

Karnataka Voice

Latest Kannada News

ಅಣ್ಣನ ಅಗಲಿಕೆಯಲ್ಲೂ ಸೇವೆಗೆ ನಿಂತ ಶಾಸಕ: ಅಧಿಕಾರಿ ಹೊಲದೊಳಗೆ ಹೋದಾಗ ಏನಾಯ್ತು..?

1 min read
Spread the love

ನವಲಗುಂದ: ತನ್ನ ಒಡಹುಟ್ಟಿದವನ ಅಗಲಿಕೆಯ ನೋವು ಒಡಲಾಳದಲ್ಲಿ ತುಂಬಿಕೊಂಡಿರುವ ಶಾಸಕ, ಸಹೋದರ ಇಷ್ಟಪಡುವ ಕೃಷಿ ಭೂಮಿಯಲ್ಲಿ ಹೆಜ್ಜೆ ಹಾಕಿದಾಗ ರೈತರ ಆಸಕ್ತಿಯಲ್ಲೇ ಅಣ್ಣನ ಕಾಣುವ ಹಾಗೇ ಶಾಸಕರೋರ್ವರು ನಡೆದುಕೊಂಡರು.

ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಇತ್ತೀಚೆಗೆ ಸಹೋದರನನ್ನ ಕಳೆದುಕೊಂಡು ಅದರಿಂದ ಹೊರಬರದೇ ನೋವಿನಲ್ಲಿದ್ದಾರೆ. ಹಾಗಂತ ಕ್ಷೇತ್ರದ ಜನರ ನೋವಿಗೆ ಸ್ಪಂಧಿಸದೇ ದಿನಗಳನ್ನ ನೂಕುತ್ತಿಲ್ಲ. ತಮ್ಮೇಲ್ಲ ನೋವನ್ನ ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.

ತಮ್ಮ ಸಹೋದರನ ಸ್ಮರಣೆಯನ್ನ ಬಿಡದಿರುವ ಶಾಸಕರಿಗೆ ಮತ್ತೊಂದು ಮನಸ್ಸಿಗೆ ನಾಟುವ ಘಟನೆ ನಡೆಯಿತು. ಬೆಳೆ ಸಮೀಕ್ಷೆಗೆ ಚಾಲನೆ ನೀಡಬೇಕು ಅಂದಾಗ ರೈತರಿಂದಲೇ ಅದಕ್ಕೆ ಚಾಲನೆ ನೀಡಿದರು. ಸರಕಾರದ ಯೋಜನೆಯನ್ನ ಪ್ರತಿಯೊಬ್ಬರು ಬಳಕೆ ಮಾಡಿಕೊಳ್ಳಿ ಎಂದು ಹೇಳಿದ್ರು ಕೂಡಾ..

ಆದರೆ, ಅಧಿಕಾರಿಯೋರ್ವರು ‘ಸರ್. ಹೊಲಕ್ಕೆ ಹೋಗಿ ಡೆಮೋ ತೋರಿಸ್ತೇನಿ’ ಅಂದಾಗ ಮತ್ತೆ ಅಣ್ಣನ ನೆನಪಲ್ಲಿ ಶಾಸಕರು ಜಾರಿದ್ರು. ತಮ್ಮ ಸಹೋದರ ಹೊಲದಲ್ಲಿ ಕೆಲಸ ಮಾಡಿಯೇ ಖುಷಿ ಪಡುತ್ತಿದ್ದ ಮತ್ತೂ ಆತನಿಲ್ಲ ಎಂಬ ನೋವು ಮತ್ತಷ್ಟು ಕಾಡತೊಡಗಿತು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೊಲದಲ್ಲಿ  ರೈತರೊಂದಿಗೆ ಹೆಜ್ಜೆ ಹಾಕುತ್ತ ಹೊಲದಲ್ಲಿದ್ದ ‘ಹೆಸರು ಕಾಯಿ’ಯನ್ನ ಹರಿಯುತ್ತಿದ್ದಾಗ ಆ ಕಡೆ ಈ ಕಡೆ ನೋಡ್ತಾಯಿದ್ರು.. ಬಹುತೇಕ ನಮ್ಮಣ್ಣ ಇಲ್ಲೇ ಎಲ್ಲೋ ಇದ್ದಾನೆ ಅಂದುಕೊಂಡು.

ಅಣ್ಣನ ನೋವಿನಲ್ಲೂ ರೈತರ ಬದುಕನ್ನ ಹಸನು ಮಾಡುವ ಯೋಜನೆಗೆ ಚಾಲನೆ ಮಾಡಿ, ಅಣ್ಣನನ್ನ ರೈತರ ಮೊಗದಲ್ಲಿ ಕಾಣಬೇಕೆಂದುಕೊಂಡು ವಾಹನ ಹತ್ತಿದ್ರು.. ಇಂತಹ ಮಾನವೀಯತೆಯ ಶಾಸಕರ ಅವಶ್ಯಕತೆ  ಕರ್ನಾಟಕದಲ್ಲಿ ಅವಶ್ಯವಾಗಿದೆ..


Spread the love

Leave a Reply

Your email address will not be published. Required fields are marked *