ಕೆರೆಗೆ ಹಾರುತ್ತೇನೆಂದವರ ನೋವು ಕೇಳಿದ ಮುತಾಲಿಕ್: ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿ…!
ಧಾರವಾಡ: ಗಣೇಶ ವಿಗ್ರಹ ಮಾಡಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಕಲಾವಿದ ಮಂಜುನಾಥ ಹಿರೇಮಠ ಮನೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಭೇಟಿ ಮಾಡಿ, ಧೈರ್ಯ ಹೇಳಿ ಸರಕಾರವನ್ನ ತರಾಟೆಗೆ ತೆಗೆದುಕೊಂಡರು.
ಕೆಲಗೇರಿಯಲ್ಲಿ ಹಲವು ವರ್ಷಗಳಿಂದ ಗಣಪತಿ ಮೂರ್ತಿಗಳನ್ನ ಮಾಡುತ್ತಿರುವ ಮಂಜುನಾಥ ಹಿರೇಮಠ, ಮೂರ್ತಿಗಳನ್ನ ಖರೀದಿ ಮಾಡುತ್ತಿಲ್ಲ. ಸಾರ್ವಜನಿಕ ಗಣೇಶನಿಗೆ ಅವಕಾಶ ನೀಡದೇ ಇರುವುದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ ಮಾಡಿದ್ದರು. ಇದು ವೈರಲ್ ಆಗಿದ್ದರಿಂದ ಸ್ವತಃ ಪ್ರಮೋದ ಮುತಾಲಿಕ್, ಹಿರೇಮಠ ಅವರ ಬಳಿ ತೆರಳಿ ಧೈರ್ಯ ಹೇಳಿದರು.
ಸರಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೇ ಇಂತಹ ನೂರಾರೂ ಕುಟುಂಬಗಳು ಬೀದಿಗೆ ಬೀಳುತ್ತವೆ. ಕಾನೂನನ್ನ ಬಿಗಿಗೊಳಿಸಿಯಾದರೂ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.