‘ಹಡಗ’ದ ಬಿಲ್ಡಿಂಗ್ ದಲ್ಲಿ ಹಾಡುಹಗಲೇ ಪಟಾಲಂ: ಹೊಡೆಯೋಕೆ ಬಂದಿದ್ರಾ 25 ಜನ.. ಉಪನಗರ ಠಾಣೆಯಲ್ಲಿ…?
1 min readಹುಬ್ಬಳ್ಳಿ: ನಗರದ ಜನನೀಬಿಡ ಪ್ರದೇಶದಲ್ಲಿರುವ ಯುರೇಕಾ ಟಾವರ್ ನಲ್ಲೇ ಜಾಗ ಬಿಡಿಸಿಕೊಳ್ಳಲು 25ಕ್ಕೂ ಹೆಚ್ಚು ಜನರು ಆಗಮಿಸಿದ್ದರಿಂದ ಹಲವು ಊಹಾಪೋಹಗಳಾಗಿ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋದ ಘಟನೆ ಈಗಷ್ಟೇ ನಡೆದಿದೆ.
ಸುರೇಶ ಎಂಬುವವರು ಮೊದಲಿಂದಲೂ ಇದ್ದ ಕಟ್ಟಡವನ್ನ ಬೇರೆಯವರು ಲೀಸ್ ಗೆ ಪಡೆದಿದ್ದಾರೆ. ಆದರೆ, ಅದನ್ನ ಬಿಟ್ಟು ಕೊಡದೇ ಸತಾಯಿಸುತ್ತಿರುವ ಪರಿಣಾಮ, ಇತ್ತೀಚೆಗೆ ಲೀಸ್ ಪಡೆದ ವ್ಯಕ್ತಿ ಅನೇಕರನ್ನ ಕರೆದುಕೊಂಡು ಅಲ್ಲಿಗೆ ಆಗಮಿಸಿದ್ದ. ಇದೇ ಕಾರಣಕ್ಕೆ ಹಲವು ಅನುಮಾನಗಳು ಮೂಡಿದ್ದವು.
ಕೆಲವರು ಕೆಲವರಿಗೆ ಕಾಲ್ ಮಾಡಿ, ಹೊಡೆಯಲು ಬಂದಿದ್ದಾರೆಂದು ಹೇಳಿದ್ದರಿಂದ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ಅಲ್ಲಿಗೆ ತೆರಳಿದಾಗಲೂ, ಯುವಕರ ಪಡೆ ಜಮಾಯಸಿದ್ದನ್ನ ನೋಡಿ, ಪರಿಸ್ಥಿತಿಯನ್ನ ಶಾಂತಗೊಳಿಸಲು ಮುಂದಾದರು.
ಎರಡು ಕಡೆಯ ಜನರನ್ನ ಕರೆದುಕೊಂಡು ಉಪನಗರ ಠಾಣೆಗೆ ಕರೆದುಕೊಂಡು ಹೋಗಿದ್ದು, ವಿಚಾರಣೆಯನ್ನ ಮಾಡಲಾಗುತ್ತಿದೆ.