ಪೊಲೀಸರ ಮೇಲೆ ಸಿಟ್ಟಂತೆ.. ಕುಡಿದನಂತೆ.. ಝಂಡಾ ಕಟ್ಟಿ ಗಲಭೆಗೆ ಸ್ಕೇಚಂತೆ: ದುಷ್ಕರ್ಮಿ ಉದ್ದೇಶಪೂರ್ವಕ ಮಾಡಿಲ್ವಂತೆ..!
ಹುಬ್ಬಳ್ಳಿ/ಚಿಕ್ಕಮಗಳೂರು: ಶೃಂಗೇರಿಯ ಚಿನ್ನದಅಂಗಡಿಯಲ್ಲಿ ಕಳ್ಳತನದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಿಲಿಂದ ಅಲಿಯಾಸ್ ಮನೋಹರ ಮುಸ್ಲಿಂ ಬಾವುಟವನ್ನ ಶಂಕರಾಚಾರ್ಯರ ಪುತ್ಥಳಿಗೆ ಕಟ್ಟುವ ಮೂಲಕ ಗಲಭೆಗೆ ಸ್ಕೇಚ್ ಹಾಕಿದ್ದವನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಹುಬ್ಬಳ್ಳಿಯ ವಿಶ್ವ ವಿಪ್ರ ಸೇವಾ ಟ್ರಸ್ಟ್ ಹೋರಾಟ ನಡೆಸಿತು.
ಪೊಲೀಸರ ಮೇಲಿನ ಸಿಟ್ಟಿನಿಂದ ಆರೋಪಿ ಮನೋಹರ ಬೆಂಗಳೂರಿನಲ್ಲಿ ಗಲಾಟೆ ನಡೆದ ಸಮಯವನ್ನೇ ಬಳಕೆ ಮಾಡಿಕೊಂಡು ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಶಂಕರಾಚಾರ್ಯರ ಪುತ್ಥಳಿಗೆ ಅಪಮಾನ ಮಾಡುವ ಪ್ರಯತ್ನ ಮಾಡಿದ್ದ. ಆರೋಪಿಯನ್ನ ಪೊಲೀಸರು ಸಿಸಿಟಿವಿ ಆದಾರದ ಮೇಲೆ ಬಂಧನ ಮಾಡಿದ್ದಾರೆ. ಬಂಧನದ ನಂತರ ಪೊಲೀಸ್ ಅಧಿಕಾರಿಗಳು ಮಾತನಾಡಿ, ಮನೋಹರ ಕುಡಿದ ಅಮಲಿನಲ್ಲಿ ಹೀಗೆ ಮಾಡಿದ್ದಾನೆಂದು ಹೇಳಿಕೊಂಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ವಿಶ್ವ ವಿಪ್ರಸೇವಾ ಟ್ರಸ್ಟ್ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ, ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.