ಕೊರೋನಾಗೆ ಮತ್ತೋಬ್ಬ ಶಿಕ್ಷಕ ಬಲಿ: ಇಲಾಖೆಯಲ್ಲಿ ತಳಮಳ ಮೂಡಿಸುತ್ತಿರುವ ವೈರಸ್..
1 min readಕೊಪ್ಪಳ: ಕೊರೋನಾ ವೈರಸ್ ಗೆ ಮತ್ತೋರ್ವ ಶಿಕ್ಷಕ ಬಲಿಯಾಗಿದ್ದು, ಈ ಮೂಲಕ ನಾಲ್ಕು ಶಿಕ್ಷಕರು ಕೋವಿಡ್-19 ಗೆ ಜೀವ ಕಳೆದುಕೊಂಡತಾಗಿದೆ. ಈ ಪ್ರಕರಣಗಳು ಶಿಕ್ಷಕ ಸಮೂಹದಲ್ಲಿ ಆತಂಕದ ವಾತವಾರಣವನ್ನ ಮೂಡಿಸಿದೆ.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ಶಾಲೆಯ ಶಿಕ್ಷಕ ಎಸ್.ಎಫ್.ಲಮಾಣಿ ಕೊರೋನಾಗೆ ಬಲಿಯಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಲಮಾಣಿಯವರ ಸಾವು, ಈ ಭಾಗದ ವಲಯದಲ್ಲಿ ಅತೀವ ನೋವನ್ನುಂಟು ಮಾಡಿದೆ.
ಕೊರೋನಾ ಸಮಯದಲ್ಲಿ ಗ್ರಾಮೀಣ ಪ್ರದೇಶದ ಪಾಲಕರು ಬರುವುದು ಹೋಗುವುದು ನಡೆಯುತ್ತಲೇ ಇದೆ. ಬೇರೆ ಬೇರೆ ಕಾರಣಕ್ಕೆ ಶಿಕ್ಷಕರನ್ನ ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆಯಾದ್ದರಿಂದ ಇಂತಹ ಪ್ರಕರಣಗಳು ನಡೆಯುತ್ತಿವೆ. ಸರಕಾರ 50 ವಯಸ್ಸಿನ ಮೇಲಿನವರ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆಯನ್ನ ರೂಢಿಸಿಕೊಳ್ಳಬೇಕೆಂಬ ಭಾವನೆಗಳು ಕೂಡಾ ಶಿಕ್ಷಕರಲ್ಲಿ ಮೂಡುತ್ತಿವೆ.
ಲಮಾಣಿಯವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬಕ್ಕೆ ನೋವು ಮರೆಯುವಂತಾಗಲಿ ಎಂದು ಶಿಕ್ಷಕ ವಲಯ ಆಶಿಸಿದೆ.