ಹುಬ್ಬಳ್ಳಿ ಯುವಕ ದೇಶಕ್ಕೆ ಮಾದರಿ: ಆತ ಮಾಡಿದ್ದನ್ನ ಜೀವನದಲ್ಲಿ ನೀವೆಂದೂ ಮಾಡಿರಲು ಸಾಧ್ಯವೇಯಿಲ್ಲ..!
ಹುಬ್ಬಳ್ಳಿ: ಈ ಯುವಕ ಮಾಡಿದ ಕಾರ್ಯವನ್ನ ಯಾರೂ ಮಾಡಿರಲೂ ಸಾಧ್ಯವೇಯಿಲ್ಲ ಬಿಡಿ. ಇಂತವರ ಸಂಖ್ಯೆ ಪ್ರತಿ ಮೂಲೆ ಮೂಲೆಯಲ್ಲೂ ಬೆಳೆಯಬೇಕು. ಮಾನವೀಯತೆ ಉಳಿಯೋದು ಹೀಗೆ ಅನ್ನೋದನ್ನ ೀ ಯುವಕ ತೋರಿಸಿಕೊಟ್ಟಿದ್ದು, ಇದು ದೇಶಕ್ಕೆ ಮಾದರಿಯಾಗುವ ಕೆಲಸವಾಗಿದೆ. ಅದೇನು ಅನ್ನೋದನ್ನ ನೋಡುವ ಮೊದಲು ಈ ವೀಡಿಯೋ ನೋಡಿಬಿಡಿ..
ಈತ ಗಿರೀಶ ಜಾಡರ.ಅಮರಗೋಳದ ನಿವಾಸಿ. ತನ್ನ ಹುಟ್ಟುಹಬ್ಬವನ್ನ ಕೇಕ್ ಕಟ್ ಮಾಡಿ, ದೋಸ್ತರಿಗೆ ಒಳ್ಳೆಯ ಪಾರ್ಟಿ ಕೊಟ್ಟು ಸುಮ್ಮನಿರುವ ಕಾಲದಲ್ಲಿ ಈತ ಮಾನವೀಯತೆಯನ್ನ ಎತ್ತಿ ಹಿಡಿದಿದ್ದಾನೆ. ಭಿಕ್ಷುಕನಿಗೆ ಒಂದು ದಿನವಾದರೂ ನೆಮ್ಮದಿ ಕೊಡಲು ಸಾಧ್ಯವೆಂದುಕೊಂಡು ಆತನಿಗೆ ನ್ಯೂ ಲುಕ್ ಕೊಡಿಸಿದ್ದಾನೆ. ಜೊತೆಗೆ ಹೊಟೇಲ್ ಗೆ ಕರೆದುಕೊಂಡು ಹೋಗಿ ಚೆಂದನೆಯ ಊಟ ಮಾಡಿಸಿದ್ದಾನೆ.
ವಾಣಿಜ್ಯನಗರಿಯಲ್ಲೂ ಇಂತಹ ಯುವಕ ಇರೋದು ಎಲ್ಲರು ಹೆಮ್ಮ ಪಡುವಂತಹದು. ಗಿರೀಶ ಜಾಡರ ಇನ್ನೂ ನೂರ್ಕಾಲ ಬಾಳಲಿ. ಅವನಿಗೆ ಇಂತಹ ಸೇವೆ ಮಾಡುವ ಮನಸ್ಸನ್ನ ಕೊಡಲಿ ಎಂದು ನಾವೂ ಹಾರೈಸೋಣವಲ್ಲವೇ..