ಧಾರವಾಡದಲ್ಲಿ 253 ಪಾಸಿಟಿವ್ ಕೇಸ್: 351 ಸೋಂಕಿತರು ಗುಣಮುಖ
ಧಾರವಾಡ ಜಿಲ್ಲೆಯ ಜನರಿಗೆ ಇವತ್ತು ಶುಭ ಸುದ್ದಿ. ಇಂದು ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 8387 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 5716 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದಿನ 9 ಜನರ ಸಾವಿನಿಂದ ಒಟ್ಟು ಮೃತಪಟ್ಟವರ ಸಂಖ್ಯೆ 258ಕ್ಕೇರಿದೆ.