Karnataka Voice

Latest Kannada News

‘ದೇವ’ದುರ್ಗದ ನೆಮ್ಮದಿ ಕೆಡಿಸಿದ ಯುವಕನ ಪೋಸ್ಟ್: ರಾತ್ರಿಯೇ ಶುರುವಾಗಿದೆ ಠಾಣೆ ಮುಂದೆ ಗಲಾಟೆ…

Spread the love

ರಾಯಚೂರು: ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಯುವಕನನ್ನ ಬಂಧಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ನೂರಾರೂ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಅನ್ಯ ಕೋಮಿನ ಯುವಕ ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದು ವೈರಲ್ ಆಗಿದ್ದು, ಪ್ರತಿಯೊಬ್ಬರಲ್ಲೂ ಆಕ್ರೋಶ ಮೂಡಿಸಿದೆ. ತಕ್ಷಣ ದೇವದುರ್ಗ ಪೊಲೀಸ್ ಠಾಣೆಯ ಮುಂದೆ ಜನರು ಜಮಾಯಿಸಿದ್ದು, ಪೋಸ್ಟ್ ಮಾಡಿದವನ ಬಂಧನ ಮಾಡುವಂತೆ ಆಗ್ರಹಿಸುತ್ತಿದ್ದಾರೆ.
ನೂರಾರೂ ಜನ ಪೊಲೀಸ್ ಠಾಣೆಯ ಮುಂದೆ ಜಮಾವಣೆಗೊಂಡಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನ ಕರೆಸಲಾಗಿದೆ.
ಯಾರೇ ಬಂದರೂ ಆರೋಪಿಯ ಬಂಧನವಾಗುವವರೆಗೂ ನಾವೂ ಇಲ್ಲಿಂದ ಕದಲುವುದಿಲ್ಲವೆಂದು ಹಠ ಹಿಡಿದಿರುವ ಕಾರ್ಯಕರ್ತರ ಮನವೊಲಿಸಲು ಪೊಲೀಸರು ಪ್ರಯತ್ನ ಪಡುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *