“ಆ’ ಆಡೀಯೋದಲ್ಲಿ ಮಾತಾಡಿದ್ದು ಯಾರೂ..! ಸತ್ಯ ಬೇಕಿಲ್ಲವೇ..? : ಎಕ್ಸಕ್ಲೂಸಿವ್
“ಆ’ ಆಡೀಯೋದಲ್ಲಿ ಮಾತಾಡಿದ್ದು ಯಾರೂ..! ಸತ್ಯ ಬೇಕಿಲ್ಲವೇ..? : ಎಕ್ಸಕ್ಲೂಸಿವ್
ಧಾರವಾಡ: ಶಾಸಕ ಅರವಿಂದ ಬೆಲ್ಲದ ಮತ್ತು ಸಂಸದ ಪ್ರಲ್ಹಾದ ಜೋಶಿ ಅವರಿಗೆ ಶಿಕ್ಷಣದ ಪಾವಿತ್ರ್ಯತೆ ಗೊತ್ತಿಲ್ವಂತೆ. ನೀರಲಕೇರಿಯವರಿಗೆ ಹೇಳಿ ಇಶ್ಯೂ ಮಾಡಿಸಿ, ಫುಲ್ ಬೆಂಬಲ ಸಿಗತ್ತೆ. ವಿದ್ಯಾರ್ಥಿಗಳು ಸಪೋರ್ಟ್ ಮಾಡ್ತಾರ್ರೀ.. ಎನ್ನುತ್ತ ಸಾಗುವ ಆಡೀಯೋ ಒಂದು ಕರ್ನಾಟಕ ವಿಶ್ವವಿದ್ಯಾಲಯದ ಅಂಗಳದಿಂದ ಬಂದಿದೆಯಂದು ರಾದ್ಧಾಂತವಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯರು ಹಣ ಮಾಡೋಕೆ ಬಂದಿದ್ದಾರಂತೆ. ಮೊದಲಿದ್ದವರೂ ಹಾಗೇ ಮಾಡಿದ್ರು. ಈಗ ಬಂದವರಲ್ಲಿ ಇಬ್ಬರು ಮಾತ್ರ ಅದ್ಕ್ ನಿಂತಾರ.. ಹೀಗೆ ಶುರುವಾಗುವ ಆಡೀಯೋ ಹಲವು ವಿವರಗಳನ್ನ ಹೊರ ಹಾಕುತ್ತದೆ. ಆದರೆ, ಆ ಆಡೀಯೋ ನಂದಲ್ಲ ಎನ್ನುತ್ತಿದ್ದಾರೆ ಕರ್ನಾಟಕ ಕಲಾ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಜಗದೀಶ ಕಿವುಡನವರ..
ಈ ಘಟನೆಗೆ ಮೂಲ ಕಾರಣವಾಗಿದ್ದು ಆ 18 ನಿಮಿಷ 53 ಸೆಕೆಂಡಿನ್ ಆಡೀಯೋ.. ಅದ್ರಲ್ಲಿ ಡಾ.ಜಗದೀಶ ಕಿವುಡನವರ ಥರಾನೇ ಮಾತಾಡಿದ್ದಾರೆ ಅನ್ನೋದು ಆರೋಪ. ಅಸಲಿಗೆ ಈ ಆಡೀಯೋ ಕೇಳಿದರೇ ಎಲ್ಲವೂ ಬಯಲಾಗತ್ತೆ. ಮಾತನಾಡುತ್ತಿರುವ ವ್ಯಕ್ತಿ ಒಂದು ಜಾತಿಯವರನ್ನೇ ಟಾರ್ಗೆಟ ಮಾಡಿ ಮಾತಾಡುತ್ತಲೇ ಹೋಗುತ್ತಾನೆ. ಇನ್ನೊಂದು ಧರ್ಮದವರನ್ನ ಹೊಗಳುತ್ತಾ ಹೋಗುತ್ತಾನೆ. ಇದಕ್ಕೆ ಕಾರಣ ಮಾತಾಡುವವ ಇವರಿಬ್ಬರನ್ನೂ ಬಳಸಿಕೊಳ್ಳುವಾತನೇ ಇರಬಬಹುದೆಂದು ಹೇಳಲಾಗುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಸಿಂಡಿಕೇಟ್ ಸದಸ್ಯರಲ್ಲಿ ಕಲ್ಮೇಶ ಹಾವೇರಿಪೇಟೆ ವಿದ್ಯಾವಂತ. ಯಾವತ್ತೂ ಹಣದಾಸೆಗೆ ಬಿದ್ದು ಮುಂದು ಹೋದವರಲ್ಲ ಅಂತವರ ಬಗ್ಗೆಯೂ ಅಸಹ್ಯವಾಗಿ ಮಾತನಾಡಲಾಗಿದೆ. ಶಾಸಕ ಅರವಿಂದ ಬೆಲ್ಲದ, ಸಂಸದ ಪ್ರಲ್ಹಾದ ಜೋಶಿಯವರ ಬಗ್ಗೆಯೂ ಮಾತನಾಡಲಾಗಿದೆ. ಈ ಆಡೀಯೋದ ಬಗ್ಗೆ ರಗಳೆ ಆರಂಭವಾದ ತಕ್ಷಣವೇ ನಾನು ಅವನಲ್ಲ ಎಂದು ಒಂದು ಆಡೀಯೋ ಮತ್ತು ಪತ್ರವನ್ನ ಬರೆದುಕೊಟ್ಟಿರುವ ಡಾ.ಜಗದೀಶ ಕಿವುಡನವರ, ನನ್ನಿಂದ ಯಾರಿಗಾದರೂ ಮನಸ್ಸಿಗೆ ಬೇಜಾರಾಗಿದ್ದರೇ ಕ್ಷಮಿಸಿ ಎಂದು ಬರೆದುಕೊಟ್ಟಿದ್ದಾರೆ.
ಈ ಘಟನೆಯ ಬಗ್ಗೆ ಸಮಗ್ರವಾದ ತನಿಖೆ ಮಾಡಿಸುವ ಅವಶ್ಯಕತೆಯಿದೆ. ಈ ಸತ್ಯವನ್ನ ಹೊರಗೆ ಹಾಕಬೇಕಾದ ಅನಿವಾರ್ಯತೆಯಿದೆ. ಸಿಂಡಿಕೇಟ್ ಸದಸ್ಯರಾದವರು ಹಣಕ್ಕಾಗಿಯೇ ಬರುತ್ತಾರೆ ಎಂಬ ಭಾವನೆ ಮುಂದಿನ ದಿನಗಳಲ್ಲಿ ಯಾರಿಗೂ ಮೂಡಬಾರದಲ್ವೇ..