ಕೊರೋನಾಗೆ ಪ್ರಾಂಶುಪಾಲ ಸಾವು: ನಿಲ್ಲುತ್ತಿಲ್ಲ ಶಿಕ್ಷಕರ ಮರಣ: ಕಂಗಾಲಾಗುತ್ತಿದೆ ಶಿಕ್ಷಕ ಸಮೂಹ
ಲಕ್ಷ್ಮೇಶ್ವರ: ಆರೋಗ್ಯವಾಗಿದ್ದ ಪ್ರಾಂಶುಪಾಲರು ಕೊರೋನಾ ವೈರಸ್ ತಗುಲಿ ಉಸಿರಾಟದ ತೊಂದರೆಯಿಂದ ಸಾವಿಗೀಡಾದ ಘಟನೆ ಸಂಭವಿಸಿದ್ದು, ಪ್ರತಿದಿನವೂ ಒಂದಿಲ್ಲಾ ಒಂದು ಕಡೆ ಶಿಕ್ಷಕರು ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.
ಗೊಜನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಪ್ಪ ತಳಗಡೆ ಕೊರೋನಾಗೆ ಬಲಿಯಾಗಿದ್ದು, ಒಂದೇ ವಾರದಲ್ಲಿ ಇದು ಏಳನೇ ಸಾವಾಗಿದೆ. ಪ್ರಸ್ತುತ MDRS ಮಾರನಬೀಡು ಜಿ-ಹಾವೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಳಗಡೆ, ವಸತಿ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಿ ಕೊಡುವಲ್ಲಿ ಮುಂದ್ದಿದ್ದರು.
ಮಲ್ಲಪ್ಪ ಕೆಳಗಡೆ ಅವರ ಸೇವೆಯನ್ನ ಗುರುತಿಸಿ ಜವಾಬ್ದಾರಿಯನ್ನ ನೀಡಿದ್ದ ಶಿಕ್ಷಣ ಇಲಾಖೆಯ ಕೀರ್ತಿ ಹೆಚ್ಚಿಸುವಂತೆ ಕಾರ್ಯವನ್ನ ಮಾಡಿದ್ದರು. ಪ್ರತಿಯೊಂದು ಮಗುವಿನ ಬಗ್ಗೆ ಕಾಳಜಿ ವಹಿಸುತ್ತಿದ್ದ ಇವರು, ಪ್ರತಿಯೊಬ್ಬರು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲಿ ಎಂದು ಬಯಸುತ್ತಿದ್ದರು.
ಇಂತಹ ಉತ್ತಮ ಪ್ರಾಂಶುಪಾಲರು ಸಾವು, ಈ ಭಾಗದ ಶಿಕ್ಷಕರಲ್ಲೂ ತಳಮಳ ಮೂಡಿಸಿದೆ. ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಶಿಕ್ಷಕರ ಸಂಘಗಳು ಪ್ರಾರ್ಥಿಸಿವೆ.