ಗಣೇಶ ವಿಗ್ರಹ ಖರೀದಿ ಮಾಡಿದ್ರಾ “ಇಮ್ರಾನ್ ಯಲಿಗಾರ-ಇಸ್ಮಾಯಿಲ ತಮಾಟಗಾರ”: ಅದೇನು ನಡೀತಿದೆ ಅಂತೀರಾ..!
17 ಸಾವಿರ ಬೆಲೆಯ ವಿಗ್ರಹ ಖರೀದಿ ಮಾಡುವವರು ಕ್ಯಾನ್ಸಲ್ ಮಾಡಿದ್ರು
ಅದನ್ನೇ ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿ, ಕೆರೆಗೆ ಬಿಡುತ್ತೇನೆ ಎಂದ ಮಂಜುನಾಥ,
ದೇವರ ರೂಪದಲ್ಲಿ ನೀವು ಬಂದಿದ್ದೀರಿ ಎಂದು ಕೈ ಮುಗಿದು ವಂದಿಸಿದರು.
ಧಾರವಾಡ: ಗಣೇಶ ಮೂರ್ತಿಗಳನ್ನ ನಿರ್ಮಿಸಿ ಸರಕಾರದ ಕ್ರಮದಿಂದ ಕಂಗೆಟ್ಟು ಹೋಗಿದ್ದ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು, ಅದು ನಿಮ್ಮ ಕರ್ನಾಟಕ ವಾಯ್ಸ್.ಕಾಂನಲ್ಲಿ ಬಂದಿದ್ದು ನಿಮಗೆ ನೆನಪಿರಬಹುದೆನ್ನಿಸುತ್ತದೆ. ಈಗ ಅದೇ ಕುಟುಂಬಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ ತಮಾಟಗಾರ ಧನ ಸಹಾಯ ಮಾಡಿದ್ದು, ಅದೇ ಹಣದಲ್ಲಿ ಗಣೇಶನ ಪೂಜೆ ನಡೆಯಲಿದೆ.
ಕೆಲಗೇರಿಯ ಮಂಜುನಾಥ ಹಿರೇಮಠ, ಹಲವು ವರ್ಷಗಳಿಂದ ಗಣೇಶ ಮೂರ್ತಿಗಳನ್ನ ಮಾಡಿಕೊಂಡು ಬಂದಿದ್ದರು. ಈ ಬಾರಿಯೂ ನೂರಾರೂ ಗಣೇಶ ಮೂರ್ತಿಗಳನ್ನ ನಿರ್ಮಾಣ ಮಾಡಿದ್ದರು. ಆದರೆ, ಸರಕಾರದ ನಿಯಮದಿಂದ ಬಹುತೇಕರು ಗಣೇಶನನ್ನ ಖರೀದಿ ಮಾಡಲು ಹಿಂದೇಟು ಹಾಕಿದ್ರು. ಅದೇ ಕಾರಣಕ್ಕೆ ಈ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿತ್ತು.
ಕುಟುಂಬದ ನೋವು ನಿಮ್ಮ ಕರ್ನಾಟಕವಾಯ್ಸ್.ಕಾಂ ನಲ್ಲಿ ಬಂದ ನಂತರ ಸ್ವತಃ ಪ್ರಮೋದ ಮುತಾಲಿಕ್ ಕೂಡಾ ತೆರಳಿ, ಸಹಕಾರ ನೀಡುವ ಭರವಸೆ ನೀಡಿದ್ದರು. ಇದೀಗ ಅದೇ ಕುಟುಂಬದ ಬಳಿ ತೆರಳಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು 17 ಸಾವಿರ ರೂಪಾಯಿಯ ಗಣೇಶ ವಿಗ್ರಹ ಖರೀದಿ ಮಾಡಿದ್ರು. ಈ ಗಣೇಶನನ್ನ ಕಲಾವಿದ ಮಂಜುನಾಥ ಪೂಜೆ ಮಾಡಿ, ಕೆಲಗೇರಿಯ ಕೆರೆಯಲ್ಲಿ ಬಿಡಲಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಲಿಗಾರ, ಕಾಂಗ್ರೆಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಟಗಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಲ್ತಾಪ್ ಹಳ್ಳೂರು, ಅನಿಲಕುಮಾರ ಪಾಟೀಲ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸ್ವಾತಿ ಮಾಳಗಿ, ಪ್ರವೀಣ ಶಲವಡಿ, ಸಂತೋಷ ಜಕ್ಕಪ್ಪನವರ, ಅಬ್ದುಲ್ ದೇಸಾಯಿ, ಶಿವು ಗೋಕಾವಿ, ಶ್ರೇಯಾ ಎಸ್, ಅತಿತ್ ಕಮ್ಮಾರ, ವಿನಯ ನಾವಲ್ಲಿ, ಮಂಜುನಾಥ ಭೋವಿ, ಶಾಹಿದ್ ಶಿರಹಟ್ಟಿ, ಮೈಲಾರಿ ಹೊಸಮನಿ, ಮೆಹಬೂಬ್ ರಾಮದುರ್ಗ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.