ಶಿಕ್ಷಕರೇ ಹುಷಾರ್: ಶಾಲೆ-ಆವರಣದಲ್ಲಿ ಹೆಜ್ಜೆ ಇಟ್ಟರೇ ಶಿಸ್ತು ಕ್ರಮ: ದಾರಿ ತಪ್ಪುತ್ತಿದೇಯಾ ಶಿಕ್ಷಣ ಇಲಾಖೆ..?
ಹಾಸನ: ವಿದ್ಯಾಗಮ ಯೋಜನೆಯ ಬಗ್ಗೆ ಖಾಸಗಿ ಶಾಲೆಯ ಸಂಘದ ದೂರು ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಚ್ಚರಿಯ ಆದೇಶವನ್ನ ಹೊರಡಿಸಿದ್ದು, ಶಾಲೆಯ ಒಳಗೆ ಹಾಗೂ ಶಾಲೆಯ ಆವರಣದೊಳಗೆ ಹೋದ್ರೇ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಇಂದು ಹಾಸನ ಜಿಲ್ಲೆಯ ಅಧಿಕಾರಿಗಳು ಆದೇಶವನ್ನ ಹೊರ ಹಾಕಿದ್ದು, ವಿದ್ಯಾಗಮ ಯೋಜನೆಯ ಕಾರ್ಯಕ್ರಮದಡಿ ಶಾಲೆಯ ಒಳಗೆ ಮತ್ತು ಆವರಣದಲ್ಲಿ ಕಾರ್ಯಕ್ರಮ ನಡೆಸುವುದು ರಾಷ್ಟ್ರೀಯ ವಿಪತ್ತುಕಾಯಿದೆ ಉಲ್ಲಂಘಟನೆ ಆಗುತ್ತದೆಯಂತೆ.
ಈ ಕಾರಣದಿಂದ ಶಿಕ್ಷಕರು ಬೀದಿಯಲ್ಲಿ ನಿಂತು, ಧಾರ್ಮಿಕ ಸ್ಥಳಗಳಲ್ಲಿ ನಿಂತು ಅಥವಾ ಮರದ ನೆರಳಿನಲ್ಲಿ ನಿಂತು ಪಾಠ ಮಾಡಬೇಕೆಂದು ಕೂಡಾ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
ಆವರಣದಲ್ಲಿಯೂ ಶಾಲೆಯೊಳಗಡೆಯೂ ಹೋದರೇ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ಮೇಲೂ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಇಸಿಓ, ಬಿಆರ್ ಪಿ, ಸಿಆರ್ ಪಿ ಯವರು ಸುತ್ತೋಲೆಯನ್ನ ಪಾಲಿಸುವಂತೆಯೂ ತಿಳಿಸಿದ್ದಾರೆ.
ವಿದ್ಯಾಗಮ ದೂರು ಬಂದಿರುವುದು ಏಕೆ ಎಂಬುದನ್ನೂ ಸರಿಯಾಗಿ ತಿಳಿದುಕೊಳ್ಳುವ ಗೋಜಿಗೆ ಡಿಡಿಪಿಐ ಹೋಗಿಲ್ಲವೆನ್ನಿಸುವ ರೀತಿಯಲ್ಲಿ ಸುತ್ತೋಲೆಯನ್ನ ಹೊರಡಿಸಲಾಗಿದೆ. ಶಿಕ್ಷಕರು ಆವರಣದಲ್ಲೂ ಹೋಗಬಾರದೆಂದರೇ ಏನರ್ಥ ಸಾರ್..?