ಭಜನಾ ಪದ ನಿಲ್ಲಿಸಿದ ಗುರಪ್ಪ ಲಕ್ಕಮ್ಮನವರ: ಆ ಧ್ವನಿ ಹೇಗಿತ್ತು ಗೊತ್ತಾ..?
ಧಾರವಾಡ: ಇಡೀ ಧಾರವಾಡ ಜಿಲ್ಲೆಯಾಧ್ಯಂತ ಭಜನಾ ಪದದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹೆಬ್ಬಳ್ಳಿ ಗ್ರಾಮದ ಗುರಪ್ಪ ಲಕ್ಕಮ್ಮನವರ ಅನಾರೋಗ್ಯದಿಂದ ಇನ್ನಿಲ್ಲವಾಗಿದ್ದಾರೆ.
ಸಂಗೋಳ್ಳಿ ರಾಯಣ್ಣ ಹುಟ್ಟಿದ್ದು ಖರೇ.. ಕಿತ್ತೂರು ಚೆನ್ನಮ್ಮಂಗ್ ವಚನಾ ಕೊಟ್ಟಿದ್ದು ಖರೇ.. ಈ ಹಾಡನ್ನ ಗುರಪ್ಪ ಲಕ್ಕಮ್ಮನವರ ಹಾಡುತ್ತಿದ್ದರೇ ಇಡೀ ಹಳ್ಳಿಗೆ ಹಳ್ಳಿಯೇ ತಲೆ ತೂಗುತ್ತಿತ್ತು. ಇಂತಹ ವ್ಯಕ್ತಿ ಪ್ರತಿಯೊಬ್ಬರೊಂದಿಗೆ ಹಸನ್ಮುಖಿಯಾಗಿ ಇರುತ್ತಿದ್ದರು.
ಗುರಪ್ಪ ಲಕ್ಕಮ್ಮನವರ ಭಾರತೀಯ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರೂ, ಎಲ್ಲರೊಂದಿಗೂ ಆತ್ಮೀಯ ಸಂಬಂಧವನ್ನ ಹೊಂದಿದ್ದರು. ಅವರ ಅಕಾಲಿಕ ಸಾವು ಬಹುತೇಕರಿಗೆ ಅಚ್ಚರಿ ಮೂಡಿಸಿದೆ. ಶಾಸಕ ಅಮೃತ ದೇಸಾಯಿ ಸೇರಿದಂತೆ ಹಲವರು ಗುರಪ್ಪ ಲಕ್ಕಮ್ಮನವರ ಆತ್ಮಕ್ಕೆ ಶಾಂತಿ ಕೋರಿದ್ದು, ಇವರ ಅಗಲಿಕೆಯನ್ನ ಭರಿಸುವ ಶಕ್ತಿಯನ್ನ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.