ಧಾರವಾಡ ಜಿಲ್ಲೆ ಈಗಿಂದ್ಲೇ “ದಾರೂ” ನಿಷೇಧ: ಯಾವಾಗ ಸಿಗತ್ತೆ-ಯಾವಾಗ ಸಿಗಲ್ಲ.. ಇಲ್ಲಿದೆ ಮಾಹಿತಿ
ಧಾರವಾಡ: ಜಿಲ್ಲೆಯಲ್ಲಿ ಗಣೇಶ ಹಬ್ಬದ ಅಂಗವಾಗಿ ಇಂದಿನಿಂದಲೇ ಮಧ್ಯ ಮಾರಾಟ-ಸಾಗಾಟವನ್ನ ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದು, ಆಗಸ್ಟ್ 31ರ ವರೆಗೂ ನಿಷೇಧವಿದ್ದರೂ ಕೆಲವು ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ.
ಇಂದು ರಾತ್ರಿಯಿಂದ ಮದ್ಯ ಮಾರಾಟವನ್ನ ನಿಷೇಧ ಮಾಡಲಾಗಿದ್ದು, ಆಗಸ್ಟ್ 23 ಬೆಳಗಿನ 6ಗಂಟೆವರೆಗೆ ನಿಷೇಧ ಮಾಡಲಾಗಿದೆ. ಅದೇ ದಿನ ಅಂದರೇ ಆಗಸ್ಟ್ 23ರ ರಾತ್ರಿ 10.30ರ ವರೆಗೆ ಮದ್ಯ ಮಾರಾಟ ನಡೆಯಲಿದೆ.
ನಂತರ ಮತ್ತೆ ಆಗಸ್ಟ್ 23ರ ರಾತ್ರಿ 10.30ರಿಂದ ನಿಷೇಧ ಮುಂದುವರೆಯಲಿದ್ದು, ಆಗಸ್ಟ್ 25ರ ಬೆಳಗಿನ 6ಗಂಟೆವರೆಗೆ ನಿಷೇಧವಿರಲಿದೆ. ಮತ್ತೆ ಅವತ್ತು ರಾತ್ರಿಯವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೀಗೆ ಎರಡ್ಮೂರು ದಿನಕ್ಕೋಮ್ಮೆ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಆದೇಶ ಪ್ರತಿ ಇಲ್ಲಿದ್ದು, ಹೆಚ್ಚಿನ ಮಾಹಿತಿಯನ್ನ ಇಲ್ಲಿಂದ ಪಡೆಯಬಹುದು.
                      
                      
                      
                      
                      
                        