ಗಣೇಶನ ಹಬ್ಬಕ್ಕೆ ಬೈಕಲ್ಲಿ ಹೊರಟವ ಏನಾದ ಗೊತ್ತಾ..? ಯಾರಿಗೂ ಇಂತಹ ಸ್ಥಿತಿ ಬರಬಾರದು..!
ಹುಬ್ಬಳ್ಳಿ: ಬೇಗನೇ ಹೋಗಿ ಇವತ್ತು ಅಲಂಕಾರಕ್ಕೆ ಬೇಕಾದ ಎಲ್ಲವನ್ನೂ ತೆಗೆದುಕೊಂಡು ಬರುತ್ತೇನೆ. ನಾಳೆ ಪೂಜೆಗೆ ಬೇಕಾದ ಸಾಮಾನುಗಳನ್ನ ತೆಗೆದುಕೊಂಡು ಬರುತ್ತೇನೆ ಎಂದು ಹೊರಟ ವ್ಯಕ್ತಿ ಮರಳಿ ಮನೆಗೆ ಬಾರದ ರೀತಿಯಲ್ಲಿ ಬರುವಂತಾದ ಘಟನೆ ಗೋಕುಲ ರಸ್ತೆಯ ಬೈಪಾಸ್ ಬಳಿ ಸಂಭವಿಸಿದೆ.
ದ್ಚಿಚಕ್ರ ವಾಹನದಲ್ಲಿ ಹೊರಟಿದ್ದ ಮಂಜುನಾಥ ಪೀರಣ್ಣನವರಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಗಣೇಶನಿಗಾಗಿ ಮನೆಯಿಂದ ಹೊರಟವನ ಕುಟುಂಬವೀಗ ನೆಮ್ಮದಿಯನ್ನ ಕಳೆದುಕೊಂಡಿದ್ದು, ಹಬ್ಬದ ದಿನವೇ ಹೀಗಾಗಿದ್ದು, ಕಣ್ಣೀರು ಹಾಕುವಂತಾಗಿದೆ.