ಕಿಮ್ಸ್ ಆವರಣದಲ್ಲೇ ರಕ್ತಸಿಕ್ತ ಮಹಿಳೆ: ಹೊಡೆದ ಬಿಜೆಪಿಯಾತ ಯಾರೂ..? ಪೊಲೀಸರೇಕೆ ಮುಟ್ಟಲಿಲ್ಲ..ಎಕ್ಸಕ್ಲೂಸಿವ್
ಹುಬ್ಬಳ್ಳಿ: ಗೌರಿ ಗಣೇಶ ಹಬ್ಬದ ದಿನ ತನ್ನ ಮಗಳ ಕಾಲೇಜು ಶಿಕ್ಷಣಕ್ಕೆ ಹಣ ಕೇಳು ಹೋದ ಹೆಂಡತಿಯನ್ನ ರಕ್ತ ಬರುವಂತೆ ಹೊಡೆದು ಹೊರ ಹಾಕಿದ ಘಟನೆ ನಡೆದಿದ್ದು, ಪೊಲೀಸರು ಕೂಡಾ ‘ಕ್ಯಾರೆ’ ಅನ್ನದಿದ್ದರಿಂದ ಕಿಮ್ಸ್ ಆವರಣದಲ್ಲೇ ಮಹಿಳೆ ಕೋಮಾಗೆ ಹೋದ ಘಟನೆ ನಡೆದಿದೆ.
ಬಸವರಾಜ ಕೆಲಗೇರಿ ಎಂಬಾತನೇ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಅಳುತ್ತಲೇ ಹೇಳುತ್ತದ್ದ ಮಹಿಳೆಯ ತಲೆ, ಹೊಟ್ಟೆ ಭಾಗದಲ್ಲಿ ರಕ್ತ ಬರುತ್ತಿತ್ತು. ತನ್ನ ನೋವನ್ನ ಹೇಳಿಕೊಳ್ಳುತ್ತಲೇ ಮಹಿಳೆ ಕೋಮಾಗೆ ಜಾರಿದ್ದರಿಂದ ಚಿಕಿತ್ಸೆಗಾಗಿ ಕಿಮ್ಸ್ ಗೆ ರವಾನೆ ಮಾಡಲಾಯಿತು.
ಬಿಜೆಪಿಯ ಮುಖಂಡನೆಂದ ಹೇಳಲಾದ ಬಸವರಾಜ ಕೆಲಗೇರಿ ತನ್ನ ಪತಿಯೆಂದು ಹೇಳುತ್ತಿದ್ದ ಅನಿತಾ ಎಂಬ ಮಹಿಳೆ, ಕಿಮ್ಸ್ ಆವರಣದಲ್ಲಿ ರೋಧಿಸುತ್ತಿದ್ದ ದೃಶ್ಯ ಎಲ್ಲರನ್ನೂ ಬೇಸರಗೊಳಿಸಿತು. ಬಹುತೇಕ ಹರಿತವಾದ ಆಯುಧದಿಂದ ಹೊಡೆದಿರಬಹುದೆಂದು ಶಂಕಿಸಲಾಗಿದೆ.
ಅನಿತಾ ಎಂಬ ಮಹಿಳೆ ಗೋಕುಲ ಪೊಲೀಸ್ ಠಾಣೆಗೆ ಹೋದರೂ ಪೊಲೀಸರೂ ಯಾವುದೇ ದೂರನ್ನ ಕೇಳದೇ ಹೊರ ಹಾಕಿದ್ದಾರೆಂದು ಹೇಳುತ್ತಿದ್ದಳು. ಘಟನೆಯ ಬಗ್ಗೆ ಅವರೇಕೆ ಹಿಂಜರಿದರು ಎಂಬುದು ಕೂಡಾ ಯಕ್ಷಪ್ರಶ್ನೆಯಾಗಿದೆ.