ಪ್ರೂಟ್ ಇರ್ಫಾನ್ ಗೆ ಗುಂಡು ಹಾರಿಸಿದ್ದು ಇವರಲ್ವಂತೆ…! ಮತ್ಯಾರು…?
ಹುಬ್ಬಳ್ಳಿ: ನಡು ಮಧ್ಯಾಹ್ನವೇ ಕೊಲೆಯಾಗಿರುವ ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳನ ಮೇಲೆ ಗುಂಡು ಹಾರಿಸಿದವರು ಇನ್ನೂ ಯಾರೂ ಎಂಬುದು ಪತ್ತೆಯಾಗುತ್ತಲೇ ಇಲ್ಲ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನ ಬಂಧಿಸಿದ್ದರೂ, ಅವರು ಯಾರೂ ಗುಂಡನ್ನ ಹಾರಿಸಿಲ್ಲ. ಮೈಸೂರಿನ ಇಬ್ಬರು ಕೂಡಾ, ಬೇರೆ ಥರದ ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರೂಟ್ ಇರ್ಫಾನ್ ರೌಡಿ ಷೀಟರ್ ಆಗಿದ್ದರೂ ಕೂಡಾ, ಕೊಲೆಯನ್ನ ಮಾಡಿದ್ದು ಯಾವ ಕಾರಣಕ್ಕೆ ಎಂಬುದು ನಿಖರವಾಗಿ ಇನ್ನೂ ಪೊಲೀಸರಿಗೆ ಮಾಹಿತಿ ಸಿಗದೇ ಇರುವುದು ಸೋಜಿಗ ಮೂಡಿಸಿದೆ. ಜೈಲಿನಲ್ಲಿರುವ ಬಾಂಬೆ ಮೂಲದ ಬಚ್ಚಾಖಾನ ಹೆಸರು ಕೇಳಿ ಬಂದರೂ, ಕೊಲೆ ಮಾಡಿಸಿದ್ದು ಯಾಕೆ ಎಂಬುದು ಕೂಡಾ ಇನ್ನೂ ತಿಳಿಯುತ್ತಿಲ್ಲ. ಹೀಗಾಗಿ ಪ್ರಕರಣ ಮತ್ತಷ್ಟು ಜಟಿಲಗೊಳ್ಳುತ್ತಿದೆ.
ಹುಬ್ಬಳ್ಳಿಗೆ ಬಂದು ಗುಂಡು ಹಾರಿಸಿದ್ದು ಬಾಂಬೆದವರು ಎಂಬುದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ, ಕೊಲೆಗೆ ಬಳಕೆಯಾದ ಮೂರು ಪಿಸ್ತೂಲಗಳನ್ನ ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗಾದರೇ ಬಂದವರೆಲ್ಲರೂ ಹಣಕ್ಕಾಗಿಯೇ ಬಂದು ಹೋದವರಾಗಿದ್ದಾರೆ.
ಈಗ ಕೊಲೆಗೆ ಕಾರಣವಾದ ಆರೋಪಿಗಳನ್ನ ಹಿಡಿಯುವ ಮಹತ್ತರ ಜವಾಬ್ದಾರಿ ಪೊಲೀಸರ ಮೇಲಿದ್ದು, ಅದನ್ನ ಬೇಗ ಮುಗಿಸಬೇಕಿದೆ. ಇಲ್ಲದಿದ್ದರೇ ಅವಳಿನಗರಕ್ಕೆ ಮತ್ತೊಂದು ರೀತಿಯ ಕಂಟಕ ಆರಂಭವಾದರೂ ಅಚ್ಚರಿಯಿಲ್ಲ…
                      
                      
                      
                      
                      
                        
