ಸಚಿವ ಆಪ್ತನ ಮೇಲೆ ಗುಂಡಿನ ದಾಳಿ: ಅಲ್ಲೂ ನಿಲ್ಲುತ್ತಿಲ್ಲ ಪಿಸ್ತೂಲು ಶಬ್ಧ
ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಅಪರಿಚಿತರಿಂದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಸಚಿವ ಭೈರತಿ ಬಸವರಾಜ್ ಸಹಚರರೆನ್ನಲಾದ ಬಾಬು ಮೇಲೆ ಗುಂಡಿನ ದಾಳಿ ಕೆ.ಆರ್.ಪುರಂ ಭಾಘದಲ್ಲಿ ನಡೆದಿದೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಾಬು ಮೇಲೆ ಇಬ್ಬರು ಏಕಾಏಕಿ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದ ಬಾಬು ತಪ್ಪಿಸಿಕೊಂಡಾಗ ಆತನ ಮೇಲೆ ಮಚ್ಚು ಲಾಂಗ್ ನಿಂದ ಹಲ್ಲೆ ಮಾಡಲಾಗಿದೆ. ಇದೇ ಸಮಯದಲ್ಲಿ ಸ್ಥಳೀಯರು ಧೈರ್ಯ ತೋರಿಸಿ ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಳೇ ದ್ವೇಷದ ಹಿನ್ನಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ರಾತ್ರಿಯೇ ಕೆ.ಆರ್.ಪುರಂ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿಯನ್ನ ಕಲೆ ಹಾಕಿದ್ದು, ಸಾರ್ವಜನಿಕರು ಹಿಡಿದುಕೊಟ್ಟ ಆರೋಪಿಗಳಿಂದಲೂ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಬಾಬು ಕೆ.ಆರ್.ಪುರಂ ಶಾಸಕ ಹಾಲಿ ಸಚಿವ ಭೈರತಿ ಬಸವರಾಜರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೆನ್ನಲಾಗಿದೆ.